ಮಳೆ ಆವಾಂತರ, ಹಲವು ಮನೆಗಳಿಗೆ ನುಗ್ಗಿದ‌ ನೀರು, ಸ್ಮಾರ್ಟ್ ಸಿಟಿ ಕಾಮಗಾರಿ ಅದ್ವಾನ, ಎಲ್ಲೆಲ್ಲಿ ಏನಾಗಿದೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಹಲವೆಡೆ ಅನಾಹುತಗಳು ಸಂಭವಿಸಿವೆ.
ಅದರಲ್ಲೂ ಶಿವಮೊಗ್ಗ ನಗರದ ಶಾರದಮ್ಮ ಲೇಔಟ್, ಬಾಪೂಜಿನಗರ, ಗೋಪಾಳ, ಆರ್.ಎಂ.ಎಲ್ ನಗರ, ಹೊಸಮನೆ, ಶರಾವತಿ ನಗರ ಮೊದಲನೇ ಕ್ರಾಸ್ ಹೀಗೆ ಹಲವೆಡೆ ಮನೆಗಳಿಗೆ ನೀರು ನುಗ್ಗಿರುವ ಮಾಹಿತಿ ಲಭ್ಯವಾಗಿದೆ.

VIDEO REPORT

ರಸ್ತೆ ಇಡೀ ಮಳೆಯ ನೀರು ತುಂಬಿಕೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ಭಾರಿ ಸಮಸ್ಯೆಯಾಗಿದೆ. ಅದರಲ್ಲೂ ಹಲವೆಡೆ ವಿದ್ಯುತ್ ವ್ಯತ್ಯಯ ಆಗಿರುವುದರಿಂದ ಬೀದಿ ದೀಪಗಳಿಲ್ಲದೇ ಕತ್ತಲಲ್ಲೇ ಜನ ಓಡಾಡುತಿದ್ದಾರೆ.

READ | ಶಿವಮೊಗ್ಗದಲ್ಲಿ ಸಂಜೆಯಿಂದ ಭಾರಿ‌ ಮಳೆ

ರವೀಂದ್ರ ನಗರ, ಗಾಂಧಿನಗರ,‌ ಬಸವನಗುಡಿ ಸೇರಿದಂತೆ ನಾನಾ‌ ಕಡೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಲಾಕ್ ಡೌನ್ ಹಿನ್ನೆಲೆ ರಸ್ತೆಗಳನ್ನು ಅಗೆಯಲಾಗಿದ್ದು, ರಸ್ತೆಗಳು ಜಲಾವೃತವಾಗಿವೆ.
ರವೀಂದ್ರನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತಿದ್ದು, ಅರ್ಧಂಬರ್ಧಕ್ಕೆ ಕೆಲಸಗಳನ್ನು ನಿಲ್ಲಿಸಲಾಗಿದೆ. ಹೀಗಾಗಿ, ಅಗೆದಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಜನ ಹಿಡಿ ಶಾಪ ಹಾಕುತಿದ್ದಾರೆ.

error: Content is protected !!