ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಳಿತ ಕಾಣುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಹಾವು ಏಣಿ ಆಟವಾಡುತ್ತಿದೆ.
READ | ಶಿವಮೊಗ್ಗಕ್ಕೆ ಇಂದು ಕೊರೊನಾ ಕೊಂಚ ರಿಲೀಫ್, ಸಾವಿನ ಸಂಖ್ಯೆಯಲ್ಲೂ ಇಳಿಕೆ
ಮೇ 11ರಂದು ಭದ್ರಾವತಿಯಲ್ಲಿ 290 ಇದ್ದ ಸೋಂಕಿನ ಸಂಖ್ಯೆ 12ರಂದು 177 ಕ್ಕೆ ಇಳಿಕೆಯಾಗಿತ್ತು. ಆದರೆ, ಗುರುವಾರ ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡೊರುವ ವರದಿಯಲ್ಲಿ 277ಕ್ಕೆ ಏರಿಕೆಯಾಗಿದೆ. ಅದೇ ಶಿವಮೊಗ್ಗ ತಾಲೂಕಿನಲ್ಲಿ ಪಾಸಿಟಿವ್ ಪ್ರಮಾಣ ಕ್ರಮವಾಗಿ ಇಳಿಕೆಯಾಗುತ್ತಿದೆ. 11ರಂದು 484 ಇದ್ದ ಸಂಖ್ಯೆ 333 ಮತ್ತು 294 ಇಳಿಕೆಯಾಗಿದೆ. ಇನ್ನುಳಿದ ತಾಲೂಕುಗಳಲ್ಲೂ ಪಾಸಿಟಿವ್ ಸಂಖ್ಯೆ ಏರಿಳಿತ ಕಾಣುತ್ತಿದೆ.