ಶಿವಮೊಗ್ಗದಲ್ಲಿ ಟ್ರಾಫಿಕ್ ಜಾಮ್, ರಸ್ತೆಗಳಲ್ಲಿ ಕಿಕ್ಕಿರಿದ ಜನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಸೋಮವಾರ ಮಧ್ಯಾಹ್ನವಾದರೂ ಟ್ರಾಫಿಕ್ ಜಾಮ್ ಇದೆ.
ಬಿ.ಎಚ್.ರಸ್ತೆ, ಅಮೀರ್ ಅಹ್ಮದ್ ವೃತ್ತದಲ್ಲಂತೂ ವಾಹನಗಳು ಕಿಕ್ಕಿರಿದಿವೆ. ನೆಹರೂ ರಸ್ತೆ ಕೂಡ ಜನಾವೃತವಾಗಿದೆ.
ಟ್ರಾಫಿಕ್ ಜಾಮ್ ಗೇನು ಕಾರಣ | ನೆಹರೂ ರಸ್ತೆಯ ಒಂದು ಕಡೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚು ವಾಹನಗಳು ರಸ್ತೆಗಿಳಿದಿದ್ದು, ಸಲೀಸಾಗಿ ಚಲಿಸಲಾಗದೇ ಟ್ರಾಫಿಕ್ ಜಾಮ್ ಉಂಟಾಗಿದೆ.

READ | ಮನುಷ್ಯರನ್ನು ಕಂಡಲ್ಲಿಕಚ್ಚುತ್ತಿದ್ದ ಮಂಗನ ಸೆರೆ, ಶಿವಮೊಗ್ಗ ಮೃಗಾಲಯದಲ್ಲಿ ಟ್ರೀಟ್ಮೆಂಟ್

ಅಮೀರ್ ಅಹ್ಮದ್ ವೃತ್ತದಲ್ಲಿ ಅಶೋಕ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಒಂದು ಕಡೆಯ ರಸ್ತೆ ಬಂದ್ ಮಾಡಲಾಗಿದೆ. ಇನ್ನೊಂದು ಕಡೆ ವಾಹನಗಳು ಚಲಿಸಲಾಗದೇ ಸಂಚಾರ ವ್ಯತ್ಯಯ ಉಂಟಾಗಿದೆ. ಓ.ಟಿ. ರಸ್ತೆಯದ್ದೂ ಇದೇ ಹಣೆಬರಹ. ರಸ್ತೆಗೆ ಅಡ್ಡಲಾಗಿ ಬ್ಯಾರಿಕೆಡ್ ಹಾಕಲಾಗಿದೆ. ಆದರೆ, ಒಂದೇ ಬೈಕ್ ಸಂಚರಿಸುವಷ್ಟು ಕಿಂಡಿ ಬಿಡಲಾಗಿದೆ. ಅದರಿಂದಲೇ ಜನ ತೂರಿಕೊಂಡು ಹೋಗುತಿದ್ದಾರೆ. ಹೀಗಾಗಿ, ಅಲ್ಲಿಯೂ ವಾಹನ ದಟ್ಟಣೆ ಏರ್ಪಟ್ಟಿದೆ.

error: Content is protected !!