ಭದ್ರಾವತಿಯ ಸ್ಮಶಾನ ಬಳಿ ಸಿಕ್ತು ಕೆ.ಜಿಗಟ್ಟಲೇ ಗಾಂಜಾ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ರಸ್ತೆಯ ಸ್ಮಶಾನ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಅವರ ಬಳಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಭದ್ರಾವತಿಯ ಮೋಮಿನ್ ಮೊಹಲ್ಲಾದ ಸೈಯ್ಯದ್ ಅರ್ಬಾಜ್ ಅಲಿಯಾಸ್ ಮಂಡ್ಯ (23) ಹಾಗೂ ನೆಹರೂ ನಗರದ ಫರ್ವೀಜ್ ಮಾಯಾ(22) ಎಂಬುವವರನ್ನು ಬಂಧಿಸಲಾಗಿದೆ. ಎರಡು ಕೆ.ಜಿ. 100 ಗ್ರಾಂ ಗಾಂಜಾ, 1,600 ರೂಪಾಯಿ ನಗದು, ಒಂದು ಬೈಕ್ ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಹಳೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳು ಗಾಂಜಾ ಸಮೇತ ಬೆಲೆಗೆ ಬಿದ್ದಿದ್ದಾರೆ.

error: Content is protected !!