ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ತಾಲೂಕಿನಲ್ಲಿ 5 ಮತ್ತು ಭದ್ರಾವತಿಯಲ್ಲಿ 3 ಜನರಿಗೆ ಕೊರೊನಾ ಸೋಂಕು ತಗಲಿದೆ. ಇನ್ನುಳಿದ ತಾಲೂಕುಗಳಾದ ಸೊರಬ, ಸಾಗರ ಮತ್ತು ಹೊಸನಗರದಲ್ಲಿ ತಲಾ ಒಂದು ಸೇರಿ ಒಟ್ಟು 11 ಪ್ರಕರಣಗಳು ಕಂಡುಬಂದಿವೆ. ಶಿಕಾರಿಪುರ, ತೀರ್ಥಹಳ್ಳಿಯಲ್ಲಿ ಯಾವುದೇ ಹೊಸ ಕೇಸ್ ಕಂಡುಬಂದಿಲ್ಲ.
ರೋಗದ ಲಕ್ಷಣ ಹೊಂದಿದ್ದ 1754 ಜನರಿಂದ ಮಾದರಿ ಸಂಗ್ರಹಿಸಲಾಗಿದೆ. 2065 ನೆಗೆಟಿವ್ ಬಂದಿವೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 37 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 11, ಮನೆ ಆರೈಕೆಯಲ್ಲಿ 60 ಜನ ಇದ್ದಾರೆ. 108 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. 7200 ಕಂಟೈನ್ಮೆಂಟ್ ಜೋನ್ ಗುರುತಿಸಿದ್ದು, ಅದರಲ್ಲಿ 6603 ಕೈಬಿಡಲಾಗಿದೆ.