ಮಲೆನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿದ ಮಳೆ, ತೋಟ, ಗದ್ದೆಗಳು ಜಲಾವೃತ, ಎಲ್ಲೆಲ್ಲಿ ಏನು ಹಾನಿ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮಲೆನಾಡಿನಲ್ಲಿ ಭಾರಿ ಅನಾಹುತವನ್ನೇ ಮಾಡಿದೆ. ಅದರಲ್ಲೂ ಸಾಗರ ತಾಲೂಕಿನಲ್ಲಿ ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗದ್ದೆ, ತೋಟಗಳನ್ನು ಆಪೋಷನ ಮಾಡಿದೆ.

ಬೆಳೆ ತೋಟಗಳನ್ನು ಆಪೋಷನ ಮಾಡಿದ ಮಳೆ, ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ

ಅಡಕೆ ತೋಟಗಳಿಗೆ ನೀರು ನುಗ್ಗಿದ್ದು, ಹಲವೆಡೆ ಅಡಕೆ ಮರಗಳು ಧರೆಗುರುಳಿವೆ. ಹಲವು ಬೆಳೆಗಳು ನೀರು ಪಾಲಾಗಿವೆ. ಇದರಿಂದಾಗಿ, ರೈತ ಸಂಕಷ್ಟದಲ್ಲಿದ್ದಾನೆ.
ಸಾಗರದ ಕಂಬಳಿಕೊಪ್ಪದ ಕೆರೆಯ ಕೊಡಿ ಒಡೆದು ನೀರು ಅಕ್ಕ ಪಕ್ಕದ ಜಮೀನುಗಳಿಗೆ ನುಗ್ಗಿದೆ. ಕುಗ್ವೆ ಗ್ರಾಮದಲ್ಲಿ ತೋಟ ಮತ್ತು ಗದ್ದೆಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿಯಾಗಿದೆ.

SAGARA RAIN 3
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ ನದಿಯು ಶ್ರೀನಗರದ ಗದ್ದೆಗಳಿಗೆ ನುಗ್ಗಿದ್ದು ಪಂಪ್ ಸೆಟ್‍ಗಳು ನೀರು ಪಾಲಾಗಿವೆ. ಸಾಗರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿವೆ.
ಶಾಸಕ ಹಾಲಪ್ಪ ಕ್ಷೇತ್ರ ವೀಕ್ಷಣೆ | ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಶುಕ್ರವಾರ ಬೆಳಗ್ಗೆಯಿಂದಲೇ ಕ್ಷೇತ್ರ ವೀಕ್ಷಣೆಯಲ್ಲಿದ್ದು, ಜಲಾವೃತಗೊಂಡಿರುವ ಗದ್ದೆಗಳನ್ನು ವೀಕ್ಷಿಸಿದರು. ಕುಸಿದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಅಧಿಕಾರಿಗಳು ಶರವೇಗದಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಾರ್ವಜನಿಕರಿಗೆ ತೊಂದರೆಗಳಿಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

SAGARA RAIN 2
ಪುನರ್ವಸತಿ ಕೇಂದ್ರ ಸ್ಥಾಪನೆ | ಸಾರ್ವಜನಿಕರ ಮಾಹಿತಿಗೆ ನಗರ ವ್ಯಾಪ್ತಿಯಲ್ಲಿ ಮಳೆ ಜಾಸ್ತಿ ಆಗುತ್ತಿರುವ ಕಾರಣ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ನಗರಸಭೆಯ ಸಾಗರದಲ್ಲಿರುವ ಗಾಂಧಿ ಮೈದಾನದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದ್ದು ದೂರವಾಣಿ ಸಂಖ್ಯೆ 9480010111 ಗೆ ಕರೆ ಮಾಡುವಂತೆ ಕೋರಲಾಗಿದೆ.

https://www.suddikanaja.com/2021/02/02/preparation-to-catch-wild-tusker-in-umblebailu-forest/

error: Content is protected !!