ಶಿವಮೊಗ್ಗದಲ್ಲಿ ಅವ್ಯಾಹತ ಓಸಿ, ಮಟ್ಕಾ ದಂಧೆ, ಅಕ್ರಮದಲ್ಲಿ ಭಾಗಿಯಾಗುವ ಖಾಕಿಗೂ ತಟ್ಟಲಿದೆ ಬಿಸಿ

 

 

ಸುದ್ದಿ ಕಣಜ.ಕಾಂ | KARNATAKA | CRIME
ಶಿವಮೊಗ್ಗ:
ಜಿಲ್ಲೆಯಲ್ಲಿ ಅವ್ಯಾಹತವಾಗಿ ಓಸಿ. ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

https://www.suddikanaja.com/2021/07/17/go-shala-in-shivamogga/

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಜಾ, ಮಟ್ಕಾ ಅಕ್ರಮದಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಎಆರ್, ಕೆ.ಎಸ್.ಆರ್.ಪಿ ಇಲಾಖೆ ಅಧೀನಕ್ಕೆ ತರಲು ಚಿಂತನೆ
ಇಲಾಖೆಯಲ್ಲಿ ಡಿ.ಎ.ಆರ್., ಪೊಲೀಸ್, ಕೆ.ಎಸ್.ಆರ್.ಪಿ. ಇನ್ನೂ ಹಲವು ವಿಭಾಗಗಳಿವೆ. ಅವುಗಳಲ್ಲಿನ ನುರಿತ ಸಿಬ್ಬಂದಿಯನ್ನು ಸಕಾಲಿಕವಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ಒಂದು ಇಲಾಖೆಯ ಅಧೀನಕ್ಕೊಳಪಡಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಜ್ಞಾನೇಂದ್ರ ಮಾಹಿತಿ ನೀಡಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಅಂತೆಯೇ ರಾಜ್ಯದಲ್ಲಿ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಹಬ್ಬ, ಹರಿದಿನಗಳನ್ನು ಆಚರಿಸಲು ಸೂಚನೆ ನೀಡಲಾಗುವುದು ಎಂದರು.

https://www.suddikanaja.com/2021/02/16/target-to-ksrp-police-to-reduce-obesity/

ಬಡ್ತಿ, ನೇಮಕಾತಿ ಬಗ್ಗೆ ಸೂಕ್ತ ಕ್ರಮ
ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗೆ ಬಡ್ತಿ, ನೇಮಕಾತಿ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕೆಲವು ವಿಷಯಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಪತ್ರ ಮುಖೇನ ತಿಳಿಸಿದ್ದಾರೆ. ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಂತೆಯೇ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗೆ ಸುಸಜ್ಜಿತ ವಸತಿ ಗೃಹಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಔರಾದ್ಕರ್ ವರದಿ ಶೇ.80ರಷ್ಟು ಅನುಷ್ಠಾನಕ್ಕೆ ಬಂದಿದೆ. ತಾಂತ್ರಿಕ ತೊಡಕುಗಳಿಂದ ಬಾಕಿ ಉಳಿದಿರುವ ವರದಿಯನ್ನು ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜನ ಸ್ನೇಹಿ ಪೊಲೀಸ್ ತರಬೇತಿ
ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹ ಪೂರ್ವಕವಾಗಿ ವರ್ತಿಸಬೇಕು. ಅವರ ಅಗತ್ಯಗಳಿಗೆ ಪೂರಕವಾಗಿ ಸ್ಪಂದಿಸಬೇಕು. ಅದಕ್ಕಾಗಿ ಪೊಲೀಸ್ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದು ಹೇಳಿದರು.

https://www.suddikanaja.com/2021/06/07/demand-by-congress-to-give-permnission-to-wear-saree-during-duty-hours-to-women-police/

error: Content is protected !!