ಜನ ವಸತಿ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಲಾರಿ

 

 

ಸುದ್ದಿ ಕಣಜ.ಕಾಂ | SHIVAMOGGA | CRIME
ಶಿವಮೊಗ್ಗ: ನಗರದ ಅಮೀರ್ ಅಹಮ್ಮದ್ ಕಾಲೊನಿಯಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಅದೃಷ್ಟವಷಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಕೊಟ್ಟಾಯಂ ಕಡೆಗೆ ಹೋಗುತ್ತಿದ್ದ ಲಾರಿ ಚಾಲಕ ಕುಡಿದ ಅಮಿಲಿನಲ್ಲಿ ಚಾಲನೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಉಷಾ ನರ್ಸಿಂಗ್ ಹೋಮ್ ಕಡೆಯಿಂದ ಹೋಗುತ್ತಿದ್ದಾಗ ಅಮೀರ್ ಅಹಮ್ಮದ್ ಕಾಲೊನಿ ಸಮೀಪ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಲಾರಿ ಹಾಗೂ ಡಿವೈಡರ್ ಜಖಂಗೊಂಡಿದೆ.

error: Content is protected !!