ಹುಣಸೋಡು ಸ್ಫೋಟ ಬಳಿಕ‌ ಕ್ರಷರ್ ಬಂದ್, ಪುನರಾರಂಭಕ್ಕೆ‌ ಹೋರಾಟದ ಎಚ್ಚರಿಕೆ, ಯಾರ‌್ಯಾರು ಬೆಂಬಲ ನೀಡಿದಾರೆ ಗೊತ್ತಾ?

 

 

ಸುದ್ದಿ‌‌ ಕಣಜ.ಕಾಂ | DISTRICT | STONE CRUSHER
ಶಿವಮೊಗ್ಗ: ದೇಶದ ಗಮನವನ್ನೇ ತನ್ನತ್ತ ಸೆಳೆದಿದ್ದ ಹುಣಸೋಡು ಸ್ಫೋಟ ಪ್ರಕರಣದ ಬಳಿಕ ಜಿಲ್ಲೆಯಲ್ಲಿ ಕ್ರಷರ್ ಮತ್ತು ಕ್ವಾರಿಗಳ‌ ಮೇಲೆ‌ ತೀವ್ರ ನಿಗಾ ಇಡಲಿದೆ.‌ ನಿರ್ಬಂಧ ಹಿಂಪಡೆಯದಿದ್ದರೆ ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಾಗಿದೆ‌.

https://www.suddikanaja.com/2021/08/30/audition-by-hombale-production-house-in-shivamogga/

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಸ್ಟೋನ್ ಕ್ರಷರ್‍ಸ್ ಹಾಗೂ ಕ್ವಾರಿ ಮಾಲೀಕರ ಸಂಘ, ಜಿಲ್ಲೆಯಲ್ಲಿ ಕ್ರಷರ್ ಹಾಗೂ ಕ್ವಾರಿಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಈ ಉದ್ಯಮ ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿಸಲಾಗಿದೆ.
ಕಾಮಗಾರಿಗಳಿಗೆ ಸಿಗುತ್ತಿಲ್ಲ ಎಂ ಸ್ಯಾಂಡ್
ಖಾಸಗಿ ಹಾಗೂ ಸರಕಾರಿ ಕಾಮಗಾರಿಗಳಿಗೆ ಎಂ ಸ್ಯಾಂಡ್ ಲಭ್ಯವಾಗುತ್ತಿಲ್ಲ. ಇದರಿಂದ,‌ ಕೆಲಸಗಳು ಬಾಕಿ‌ ಉಳಿದಿವೆ. ಹೀಗಾಗಿ, ಜಿಲ್ಲಾಡಳಿತ ಅನುಮತಿ‌ ನೀಡಬೇಕು ಎಂಬ ಬೇಡಿಕೆ ವ್ಯಕ್ತವಾಯಿತು.

READ | ಸಹ್ಯಾದ್ರಿ ಕಾಲೇಜಿಗೆ ಬಂದಿದ್ದ ಕುವೆಂಪು ವಿವಿ ವಿಸಿಗೆ ಘೇರಾವ್

ಗಣಿಗಾರಿಕೆ ನಿಷೇಧಿಸಿದ್ದಕ್ಕೆ ಸಂಕಷ್ಟದಲ್ಲಿ ಉದ್ಯಮ
ಅಭಯಾರಣ್ಯ ವ್ಯಾಪ್ತಿಯಲ್ಲಿ ಕಲ್ಲುಗಣಿಗೆ ನಿಷೇಧ ಹೇರಿದ್ದರಿಂದ ಇಡೀ ಉದ್ಯಮ ಸಂಕಷ್ಟದಲ್ಲಿದೆ. ಈ ಕಾರಣದಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅದ್ಯಕ್ಷ ಎನ್.ಮಂಜುನಾಥ್ ತಿಳಿಸಿದ್ದಾರೆ.
ಪ್ರತಿಭಟನೆಗೆ ಯಾರದೆಲ್ಲ ಸಪೋರ್ಟ್?
ಲಾರಿ ಮಾಲೀಕರ ಸಂಘ ,ಎಂಜನಿಯರ್ಸ್ ಅಸೋಸಿಯೇಷನ್, ಕಟ್ಟಡ ಕಾರ್ಮಿಕ ಸಂಘ ಹೀಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.

https://www.suddikanaja.com/2021/01/26/three-application-sublimated-for-stone-crusher-in-shivamogga/

error: Content is protected !!