ಬೈಕ್ ಗಳ‌ ನಡುವೆ ನಡೀತು ಭೀಕರ ಅಪಘಾತ, ಒಬ್ಬ ಸ್ಥಳದಲ್ಲೇ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME
ಹೊಸನಗರ: ಬೈಕ್ ಗಳ‌ ನಡುವೆ ಡಿಕ್ಕಿ ಸಂಭವಿಸಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುಂಬಾರು ಗ್ರಾಮದ ಪುಟ್ಟ ಸ್ವಾಮಿ (47) ಎಂಬುವವರು ಮೃತಪಟ್ಟಿದ್ದಾರೆ. ವರಕೋಡು ಕ್ರಾಸ್ ನ ಹತ್ತಿರ ರಸ್ತೆಯಲ್ಲಿ ಬರುತ್ತಿದ್ದ ಬೈಕಿಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ.

READ | ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರಕ್ಕೆ ಕುರಿ, ಕೋಳಿ ನೋ ಎಂಟ್ರಿ

ಹೊಸನಗರ ತಾಲೂಕಿನ ಕೃಷ್ಣ(24) ಅತಿ ವೇಗದಿಂದ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ. ಇವರೂ ಗಾಯಗೊಂಡಿದ್ದು, ಸಾರ್ವಜನಿಕರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 279, 337, 304(ಎ) ಅನ್ವಯ ಪ್ರಕರಣ ದಾಖಲಾಗಿದೆ.

error: Content is protected !!