ಶಿವಮೊಗ್ಗದ ಮುಂದುವರಿದ target businessmen, ವಾಟ್ಸಾಪ್ ನಲ್ಲಿ ಬೆದರಿಕೆ ಕರೆ, ಮನೆ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿಯ ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ‌| CITY | CRIME NEWS
ಶಿವಮೊಗ್ಗ: ಶಾದ್ ನಗರದ ಉದ್ಯಮಿಯೊಬ್ಬರ ಮನೆಯ ಮೇಲೆ ಕಲ್ಲು ತೂರಾಟ ಮಾಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ನಡೆದಿದೆ.

READ | ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಉದ್ಯಮಿಗೆ ಥ್ರೆಟ್ ಕಾಲ್, ಭಟ್ಕಳದ ಮಹಿಳೆ ಅರೆಸ್ಟ್

ವಾಟ್ಸಾಪ್ ಕರೆ ಮಾಡಿರುವವರು ತಮ್ಮನ್ನು ಬಚ್ಚನ್ ಎಂದು ಪರಿಚಯಿಸಿಕೊಂಡಿದ್ದು, ಉದ್ಯಮಿಯು ಭಯದಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.
ಅಕ್ಟೋಬರ್ 25ರಂದು ರಾತ್ರಿ ಯುವಕರ ಗುಂಪೊಂದು ಉದ್ಯಮಿಯ ಮನೆಯ ಮೇಲೆ ಕಲ್ಲು ತೂರಾಟ ಮಾಡಿದೆ. ಇದಾದ ನಂತರ ವಾಟ್ಸಾಪ್ ಕರೆ ಮಾಡಿ ₹5 ಲಕ್ಷ ಹಣಕ್ಕಾಗಿ ಬೇಡಿಕೆ ಇಡಲಾಗಿದೆ.

READ | ಭದ್ರಾವತಿಯ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಈ ಮುಂಚೆಯೂ ಬಂದಿತ್ತು ಬೆದರಿಕೆ ಕರೆ
ಮನೆಯ ಮೇಲೆ ಹಲ್ಲೆ ನಡೆಯುವುದಕ್ಕೂ ಮುನ್ನ ಸೆಪ್ಟೆಂಬರ್ 16ರಂದು ಹಲ್ಲೆ ಮಾಡಲಾಗಿತ್ತು. ಆಗ #3 ಲಕ್ಷ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಒಂದುವೇಳೆ, ಕೇಳಿದಷ್ಟುನಹಣ ನೀಡದಿದ್ದರೆ ಮಕ್ಕಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ, ಉದ್ಯಮಿ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಂತರ ಕರೆ ಮಾಡಿದರೂ ಸ್ವೀಕರಿಸಿಲ್ಲ.
ಈ ಹಿಂದೆ ಹೆಬ್ಬೆಟ್ ಮಂಜನ ಹೆಸರಿನಲ್ಲಿ ಇದೇ ರೀತಿ ಉದ್ಯಮಿಯೊಬ್ಬರಿಗೆ ಬೆದರಿಕೆ‌ ಕರೆ ಮಾಡಲಾಗಿತ್ತು. ಆಗ ಅವರು ಸೂಚಿಸಿದ ಖಾತೆಗೆ ಹಣ ಸಂದಾಯ ಮಾಡಿದ್ದರು‌.‌ ತನಿಖೆ ಬಳಿಕ ಅದು ಉಗ್ರನೊಬ್ಬನ ಪತ್ನಿಯ ಖಾತೆಯಾಗಿರುವುದು ಗೊತ್ತಾಗಿ ಆಕೆಯನ್ನು ಬಂಧಿಸಿದ್ದರು.

https://www.suddikanaja.com/2021/04/18/if-you-are-a-whatsapp-user-then-this-is-a-must-read/

error: Content is protected !!