ಶೌಚ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಶೌಚ ಗುಂಡಿಯಲ್ಲಿ ಸೋಮವಾರ ನವಜಾತ ಶಿಶುವಿನ ಶವ ಪತ್ತೆಯಾಗಿದೆ.
ಹೊಳೆಹೊನ್ನೂರು ಸಮೀಪದ ಅಗರದಳ್ಳಿ ಗ್ರಾಮದ ಸಿದ್ದರ ಕಾಲೊನಿಯ ಮಹಾದೇವ ಎಂಬುವವರ ಮನೆಯ ಹಿತ್ತಲಿನಲ್ಲಿ ಶೌಚ ಗುಂಡಿಯನ್ನು ನಿರ್ಮಿಸಿದ್ದು, ಗುಂಡಿಯಲ್ಲಿ ಶಿಶುವಿನ ಶವ ತೇಲುವುದು ಕಂಡಿದೆ. ಮಗುವು ಒಂದೆರಡು ದಿನಗಳ ಹಿಂದೆ ಜನಿಸಿರಬಹುದು ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!