ಭದ್ರಾವತಿಯ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

 

 

ಸುದ್ದಿ ಕಣಜ.ಕಾಂ‌ | TALUK | CRIME NEWS
ಶಿವಮೊಗ್ಗ: ಅಂಗನವಾಡಿಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಭದ್ರಾವತಿ ತಾಲೂಕಿನ ಹೊನ್ನಟ್ಟಿ ಹೊಸೂರು ಗ್ರಾಮದ ಗಿರಿಜಮ್ಮ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಗಿರಿಜಮ್ಮ ಅವರು ಕೆಲಸಕ್ಕೆಂದು ಹೋದಾಗ ಮನೆಯ ಬೀಗ ಮುರಿದ ದುಷ್ಕರ್ಮಿಗಳು ಅಲ್ಮೇರಾದಲ್ಲಿದ್ದ ನಗದು, ಚಿನ್ನಾಭರಣ ದೋಚಿದ್ದಾರೆ.

READ | ದೇವಸ್ಥಾನದ ಎದುರು ಮಲಗಿದ್ದ ಗೋವು ಕಳ್ಳತನ, ದಾಖಲಾಯ್ತು ಎಫ್.ಐ.ಆರ್

ಕೆಲಸ ಮುಗಿಸಿ ಬಂದಾಗ ಶಾಕ್
ಕೆಲಸ ಮುಗಿಸಿ ಮನೆಗೆ ಬಂದಾಗ ಗಿರಿಜಮ್ಮ‌ ಅವರ ಮನೆ ಬಾಗಿಲಿಗೆ ಹಾಕಿದ್ದ ಮುರಿಯಲಾಗಿದೆ. ಒಳಗೆ ಪ್ರವೇಶಿಸಿ ನೋಡಿದಾಗ ಅಲ್ಮೇರಾ ಕೂಡ ತೆರೆದಿತ್ತು. ಪರಿಶೀಲಿಸಿದಾಗ ₹9 ಸಾವಿರ ನಗದು, ₹74 ಸಾವಿರ ಮೌಲ್ಯದ 21 ಗ್ರಾಂ ಬಂಗಾರದ ಸರ, ₹26 ಸಾವಿರ ಮೌಲ್ಯದ 5 ಗ್ರಾಂ ಬಂಗಾರದ ವಾಲೆ, ₹12 ಸಾವಿರ ಮೌಲ್ಯದ 3 ಗ್ರಾಂ ಬಂಗಾರದ ಮಾಟೀಲು ಸೇರಿ ಒಟ್ಟು 29 ಗ್ರಾಂ ಚಿನ್ನಾಭರಣ ಸೇರಿ ಅಂದಾಜು ₹1.21 ಲಕ್ಷ ಮೌಲ್ಯದ ಸಾಮಗ್ರಿಗಳ ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಗಿರಿಜಮ್ಮ ಅವರು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಕೊಂಡು ಪೊಲೀಸರು ತನಿಖೆ ನಡೆಸುತಿದ್ದಾರೆ.

https://www.suddikanaja.com/2021/06/22/five-accused-arrested-in-theft-case/

error: Content is protected !!