ಶಿವಮೊಗ್ಗ ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ರೈಲು ನಿಲ್ದಾಣದ ಕಟ್ಟಡ ಮುಂಭಾಗ ವ್ಯಕ್ತಿಯೊಬ್ಬರ ಶವ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.
ಮೃತನ ವಯಸ್ಸು 55-60 ವರ್ಷವಿದ್ದು, ಶವವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದೆ. ಗುರುತು ಪತ್ತೆಯಾದರೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಮಾಹಿತಿ ನೀಡಬೇಕಾದರೆ ವಾರಸುದಾರರು ಶಿವಮೊಗ್ಗ ರೈಲ್ವೆ ಪೆÇಲೀಸ್ ಸಬ್ ಇನ್ಸ್ ಪೆಕ್ಟರ್ ದೂರವಾಣಿ ಸಂಖ್ಯೆ: 08182-22974, ಮೊಬೈಲ್ ಸಂಖ್ಯೆ 9480802124ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಮೃತ ವ್ಯಕ್ತಿಯ ಚಹರೆ

ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, 5.4 ಅಡಿ ಎತ್ತರ, ತಲೆಯಲ್ಲಿ 2 ಇಂಚು ಉದ್ದದ ಬಿಳಿ ಮತ್ತು ಕಪ್ಪು ಕೂದಲು, 1 ಇಂಚು ಬಿಳಿ ಗಡ್ಡ ಮೀಸೆ ಇದೆ. ಬಲಗೈಯಲ್ಲಿ ತೆಲುಗು ಭಾಷೆಯ 4 ಅಕ್ಷರದ ಹೆಸರಿನ ಹಚ್ಚೆ ಇದೆ. ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಮತ್ತು ಕಪ್ಪು ಬಿಳಿ ಕೆಂಪು ಗೆರೆಯುಳ್ಳ ಅಡ್ಡ ಮತ್ತು ಉದ್ದ ಪಟ್ಟೆಯುಳ್ಳ ಪಂಚೆ, ಬಿಳಿ ಹಸಿರು ಬಣ್ಣದ ಅಡ್ಡ, ಉದ್ದ ಗೆರೆಯುಳ್ಳ ಟವೆಲ್, ನೀಲಿ ಬಣ್ಣದ ಯೂಸ್ ಅಂಡ್ ಥ್ರೋ ಮಾಸ್ಕ್, ಬ್ರೌನ್ ಬಣ್ಣದ ಚಪ್ಪಲಿ ಧರಿಸಿದ್ದಾರೆ.

WESTERN GHAT | ಪಶ್ಚಿಮಘಟ್ಟದಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ‘ನೇರಳೆ ಏಡಿ’, ಕಾರವಾರದಲ್ಲೂ ಪತ್ತೆ, ತಜ್ಞರೇನು ಹೇಳುತ್ತಾರೆ?