ಶಿವಮೊಗ್ಗದಲ್ಲಿ ಸಿಕ್ಕಿತು ಕೆ.ಜಿಗಟ್ಟಲೇ ಚಿನ್ನ, ನೋಟುಗಳ ಕಂತೆ, ಎಸಿಬಿ ಅಧಿಕಾರಿಗಳೇ ಶಾಕ್!

 

 

ಸುದ್ದಿ ಕಣಜ.ಕಾಂ | KARNATAKA | ACB RAID
ಶಿವಮೊಗ್ಗ: ಗದಗ ಜಂಟಿ ಕೃಷಿ ನಿದೇರ್ಶಕರ ಶಿವಮೊಗ್ಗದಲ್ಲಿರುವ ಮನೆಗಳ ಮೇಲೆ ಏಕಕಾಲಕ್ಕೆ ಎಸಿಬಿ ಬುಧವಾರ ದಾಳಿ ನಡೆಸಿದೆ. ಈ ವೇಳೆ, ಕೇಜಿಗಟ್ಟಲೇ ಚಿನ್ನ ಹಾಗೂ ನೋಟಿನ ಕಂತೆಗಳು ಸಿಕ್ಕಿವೆ. ಇದನ್ನು ಕಂಡು ಎಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಅವರ ಚಾಲುಕ್ಯನಗರ ಮತ್ತು ಗೋಪಾಳ ಬಡಾವಣೆಯಲ್ಲಿನ ಮನೆಗಳ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ಮೂರೂವರೆ ಕೋಟಿ ರೂ. ಮೌಲ್ಯದ ಏಳೂವರೆ ಕೆಜಿ ಚಿನ್ನ ಸೇರಿದಂತೆ ನೋಟುಗಳು ಸಿಕ್ಕಿವೆ.

ಕೆಜಿಗಟ್ಟಲೇ ಸಿಕ್ತು ಬಂಗಾರ, ನೋಟುಗಳ ಕಂತೆ, ವಿಡಿಯೋ ವೀಕ್ಷಿಸಿ

READ | ಶಿವಮೊಗ್ಗದ ಹಲವೆಡೆ ಎಸಿಬಿ ದಿಢೀರ್ ದಾಳಿ, ಎಲ್ಲೆಲ್ಲಿ ರೇಡ್, ಇಲ್ಲಿದೆ ಮಾಹಿತಿ

ಪರಿಶೀಲನೆ ವೇಳೆ ಸಿಕ್ತು ಚಿನ್ನದ ಬಿಸ್ಕೆಟ್, ವಜ್ರದ ಹಾರ

ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡುವಾಗ 100 ಗ್ರಾಂನ 60 ಚಿನ್ನದ ಬಿಸ್ಕೆಟ್, 50 ಗ್ರಾಂನ 8 ಚಿನ್ನದ ಬಿಸ್ಕೆಟ್, ಇತರೆ ಚಿನ್ನಾಭರಣ ಒಂದೂವರೆ ಕೆಜಿಯಷ್ಟು ಸಿಕ್ಕಿದೆ. ಜೊತೆಗೆ, ವಜ್ರದ ಹಾರಗಳು, 3 ಕೆಜಿ ಬೆಳ್ಳಿ, 15 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಪ್ರಸ್ತುತ ಚಾಲುಕ್ಯನಗರದ ಮನೆಯೊಂದರಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಸಂಪತ್ತು ಸಿಕ್ಕಿದೆ. ಗೋಪಾಳದ ಮನೆ ಪರಿಶೀಲನೆ ನಡೆಸಬೇಕಾಗಿದೆ ಎಂದು ತಿಳಿದುಬಂದಿದೆ.

follow us in link treeರುದ್ರೇಶಪ್ಪನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಮನೆಯಲ್ಲಿ ಲಭಿಸಿರುವ ಸಂಪತ್ತಿನ ಲೆಕ್ಕ ಇನ್ನಷ್ಟು ಸಿಗಬೇಕಿದ್ದು, ಇದರೊಂದಿಗೆ ಬ್ಯಾಂಕ್ ಖಾತೆ, ಲಾಕರ್ ಇತ್ಯಾದಿಗಳ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಪೂರ್ವ ವಲಯದ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಶಿವಮೊಗ್ಗದ ಡಿವೈಎಸ್ಪಿ ಲೋಕೇಶ್, ಪಿಐ ವಸಂತ ಕುಮಾರ್, ಇಮ್ರಾನ್ ಬೇಗ್ ಹಾಗೂ ಮೂವತ್ತಕ್ಕೂ ಅಧಿಕ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿದೆ.

https://www.suddikanaja.com/2021/10/01/mla-halappa-help-boy-for-treatment/

error: Content is protected !!