ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪೂರ್ವ ವಲಯದ ವಿವಿಧ ಠಾಣೆಗಳ ಪೊಲೀಸ್ ಇನ್’ಸ್ಪೆಕ್ಟರ್(PSI)ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. 50 ಪಿಎಸ್ಐಗಳ ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ ಶಿವಮೊಗ್ಗದವರೂ ಸಾಕಷ್ಟು ಜನರಿದ್ದಾರೆ. ಈ ಹಿಂದೆ ಭಾರೀ ಸಂಖ್ಯೆಯಲ್ಲಿ ಸಿಪಿಐಗಳ ವರ್ಗಾವಣೆ (CPI Transfer) ಮಾಡಲಾಗಿತ್ತು.
READ | ಶಿವಮೊಗ್ಗದ ಪೊಲೀಸ್ ಠಾಣೆಗಳಲ್ಲಿ ಸಿಪಿಐಗಳ ವರ್ಗಾವಣೆ, ಯಾವ ಠಾಣೆಗೆ ಯಾರು ಬಂದಿದ್ದಾರೆ? ಇಲ್ಲಿದೆ ಪೂರ್ಣ ಪಟ್ಟಿ
ವರ್ಗಾವಣೆ ಪಟ್ಟಿ, ಯಾರಿಗೆ ಯಾವ ಠಾಣೆ?
- ನಿಂಗಪ್ಪ ಕರಕಣ್ಣನವರ್– ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದಿಂದ ಹಾವೇರಿ ಜಿಲ್ಲೆಯ ಬಂಕಾಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
- ಸಿ.ಆರ್.ಕೊಪ್ಪದ್– ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಿಂದ ಆಗುಂಬೆ ಠಾಣೆಗೆ ವರ್ಗ.
- ಶಾಂತಲಾ– ಭದ್ರಾವತಿಯ ಹೊಸಮನೆ ಠಾಣೆಯಿಂದ ಭದ್ರಾವತಿ ಟ್ರಾಫಿಕ್ ಪೊಲೀಸ್ ಠಾಣೆಗೆ ವರ್ಗ
- ಇ.ಕವಿತಾ– ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಿಂದ ಪೇಪರ್ ಟೌನ್ ಠಾಣೆಗೆ
- ಎಸ್.ಪಿ.ಪ್ರವೀಣ್– ನ್ಯಾಮತಿಯ ತನಿಖೆ ವಿಭಾಗದಿಂದ ರಿಪ್ಪನ್ ಪೇಟೆ ಠಾಣೆಗೆ
- ಶರಣಪ್ಪ ಹಂದರಗಲ್– ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆಯಿಂದ ಅದೇ ಠಾಣೆಯಲ್ಲಿ ಮುಂದುವರಿಸಲಾಗಿದೆ.
- ಸುರೇಶ್– ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಹೊಳೆಹೊನ್ನೂರು ಠಾಣೆಗೆ ವರ್ಗಾವಣೆ
- ಶಿವಾನಂದ ಕೋಳಿ– ರಿಪ್ಪನ್ ಪೇಟೆಯಿಂದ ಹೊಸನಗರ ಪೊಲೀಸ್ ಠಾಣೆಗೆ ವರ್ಗಾವಣೆ.
- ನವೀನ್ ಮಠಪತಿ- ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಮುಂದುವರಿಕೆ
- ಕೆ.ಯುವರಾಜ್– ಮಲೇಬೆನ್ನೂರು ಪೊಲೀಸ್ ಠಾಣೆಯಿಂದ ಆನಂದಪುರ ಪೊಲೀಸ್ ಠಾಣೆಗೆ ವರ್ಗ
- ತಿರುಮಲೇಶ್– ಕಾರ್ಗಲ್ ಪೊಲೀಸ್ ಠಾಣೆಯಿಂದ ತುಂಗಾನಗರ ಠಾಣೆಗೆ ವರ್ಗಾವಣೆ.
- ಬಿ.ಎನ್.ಮಂಜುನಾಥ್– ಹಾವೇರಿ ಸಂಚಾರಿ ಪೊಲೀಸ್ ಠಾಣೆಯಿಂದ ವಿನೋಬನಗರ ಠಾಣೆ
- ಎನ್.ಎಸ್.ಭಾರತಿ– ಭದ್ರಾವತಿ ತಾಲೂಕು ಪೇಪರ್ ಟೌನ್’ನಿಂದ ನ್ಯೂಟೌನ್ ಪೊಲೀಸ್ ಠಾಣೆಗೆ ವರ್ಗ.
- ಶಿವಕುಮಾರ್– ಆಗುಂಬೆಯಿಂದ ದೊಡ್ಡಪೇಟೆ ಪೊಲೀಸ್ ಠಾಣೆಗೆ ವರ್ಗ.
- ಕೆ.ಎಚ್.ಜಯಪ್ಪ- ಭದ್ರಾವತಿ ಸಂಚಾರ ಪೊಲೀಸ್ ಠಾಣೆಯಿಂದ ಶಿವಮೊಗ್ಗ ಮಹಿಳಾ ಠಾಣೆಗೆ ವರ್ಗ.
- ಶಿಲ್ಪಾ ನಾಯಿನೇಗಿಲಿ– ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಿಂದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗ.
- ರಂಗನಾಥ್ ಅಂತರಗಟ್ಟಿ– ಭದ್ರಾವತಿಯ ನ್ಯೂಟೌನ್ ಠಾಣೆಯಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗ.
- ನೀಲಪ್ಪ ನರಲಾರ್- ಹೊಸನಗರ ಠಾಣೆಯಿಂದ ಹಿರೇಕೆರೂರು ಪೊಲೀಸ್ ಠಾಣೆಗೆ ವರ್ಗ.
- ರೂಪಾ ತೆಂಬದ್- ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಿಂದ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
Police raid | ರಾಗಿಗುಡ್ಡ, ಚನ್ನಮುಂಬಾಪುರ ಭಾಗದಲ್ಲಿ ಪೊಲೀಸರ ದಿಢೀರ್ ದಾಳಿ, 11 ಪ್ರಕರಣಗಳು ದಾಖಲು