ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು (Karnataka Skill Development Corporation) ಬೆಂಗಳೂರು ಹೋಟೆಲ್ ಅಸೋಸಿಯೇಷನ್ (Bangalore Hotel Association) ಇವರ ಸಹಯೋಗದಲ್ಲಿ ಜೂನ್ 15 ರಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯ ಮಿಷನ್, ಕೌಶಲ್ಯ ಭವನ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ, ಬೆಂಗಳೂರು-29 ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದೆ.
READ | ಉಚಿತ ಸ್ವುದ್ಯೋಗ ತರಬೇತಿಗೆ ಅರ್ಜಿ ಆಹ್ವಾನ, ಯಾವ್ಯವ ತರಬೇತಿಗಳು ಲಭ್ಯ?
ಯಾವ್ಯಾವ ಹುದ್ದೆಗಳು ಖಾಲಿ?
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಸ್ವೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಹಾಗೂ ಇತರೆ ಕೆಲಸಗಾರರ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಉದ್ಯೋಗಾವಕಾಶವಿದೆ.
ಹೆಸರು ನೋಂದಾಯಿಸಿ, ಇಲ್ಲವೇ ನೇರವಾಗಿ ಬನ್ನಿ
ಆಸಕ್ತರು, ನಿಗಮದ ಜಾಲತಾಣ https://tinyurl.com/ksdcjobdrive ರಲ್ಲಿ ನೋಂದಾಯಿಸಿಕೊಂಡು ಅಥವಾ ಜೂನ್ 15 ರಂದು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಮೇಳದಲ್ಲಿ ಭಾಗವಹಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9019485688/ ದೂ.ಸಂ.: 08182-255294 ಗಳನ್ನು ಸಂಪರ್ಕಿಸುವುದು.
Jobs in shimoga | ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿಷಯವಾರು ಮಾಹಿತಿ ಇಲ್ಲಿದೆ