ಸುದ್ದಿ ಕಣಜ.ಕಾಂ | KARNATAKA | ARECANUT SHAMPOO
ಶಿವಮೊಗ್ಗ: ಸಂಶೋಧಕ, ಮಲೆನಾಡಿನ ಉದ್ಯಮಿ ನಿವೇದನ್ ನೆಂಪೆ ಅವರು ಅಡಿಕೆ ಸಿಪ್ಪೆಯಿಂದ ಶ್ಯಾಂಪೂ ಸಂಶೋಧಿಸಿದ್ದು, ಅದು ಮಾರುಕಟ್ಟೆಗೆ ಬರಲಿದೆ.
ಅರೇಕಾ ಟೀ ಸಂಶೋಧಕ ಎಂದೇ ಹೆಸರು ಗಳಿಸಿರುವ ಇವರು ಮೂಲತಃ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಮೂಲದವಾಗಿದ್ದು, ಅಲ್ಲಿಯೇ ಸ್ಮಾರ್ಟಪ್ ವೊಂದನ್ನು ಆರಂಭಿಸಿದ್ದು, ಅಡಿಕೆಯ ಹಲವು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಅಡಿಕೆ ಚಹ ಫೇಮಸ್ ಕೂಡ ಆಗಿದೆ. ಈಗ ಮುಂದುವರಿದು ಶ್ಯಾಂಪೂ ಸಂಶೋಧಿಸಿದ್ದಾರೆ.