ಲಕ್ಷ್ಮೀ ಟಾಕೀಜ್ ಎದುರು ನಡೀತು ಉರುಳು ಸೇವೆ

 

 

ಸುದ್ದಿ ಕಣಜ.ಕಾಂ | SHIVAMOGGA CITY | PROTEST
ಶಿವಮೊಗ್ಗ: ನಗರದ ಲಕ್ಷ್ಮೀ ಟಾಕೀಜ್ ಎದುರು ದಲಿತ ಕ್ರಿಯಾ ಸಮಿತಿಯಿಂದ ರಸ್ತೆ ತಡೆದು ಉರುಳು ಸೇವೆ ಮಾಡಲಾಯಿತು.
ವಿನೋಬನಗರದ ಮುಖ್ಯ ರಸ್ತೆಯಲ್ಲಿರುವ ಶಿವಾಲಯ ಪಕ್ಕ ಪಾಲಿಕೆಯಿಂದ ನಿರ್ಮಾಣ‌ ಮಾಡಲಾಗಿರುವ ಮಳಿಗೆಗಳನ್ನು ಬೀದಿ ಬದಿ ವ್ಯಾಪಾರಿಗಳಿಗೆ ನೀಡುವಂತೆ ಒತ್ತಾಯಿಸಿ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಪದ ಕಣಜ- 9 | ‘ಕಾಕಪಾದ’ದ ಬಗ್ಗೆ ನಿಮಗೆ ಗೊತ್ತೆ, ತಪ್ಪು ತಿದ್ದುವಲ್ಲಿ ಈ ಪದ ಭಾರಿ ಉಪಯುಕ್ತ

ಲಕ್ಷ್ಮೀ ಟಾಕೀಜ್ ಬಳಿ‌ ಇರುವ ಬೀದಿ ವ್ಯಾಪಾರಿಗಳಿಗೆ ಮಳಿಗೆ ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಅದರನ್ವಯ ಕಳೆದ 15 ವರ್ಷಗಳಿಂದ ಆ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಗುರುತಿಸಿ ಪಟ್ಟಿ ಮಾಡಿ ಅಧಿಕೃತವಾಗಿ ವಿತರಣೆಯನ್ನು ಕೂಡ ಮಾಡಲಾಗಿತ್ತು. ಆದರೆ, ಮಳಿಗೆ ಹಂಚಿಕೆಯಲ್ಲಿ ಲೋಪವಾದ‌ ಕಾರಣ ವಿತರಣೆ ಸ್ಥಗಿತಗೊಳಿಸಲಾಗಿದೆ. ಈಗ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಬೀದಿ‌ಬದಿ ವ್ಯಾಪಾರವನ್ನೇ ನಂಬಿಕೊಂಡಿರುವ ಕುಟುಂಬಗಳು ಬೀದಿಗೆ ಬಿದ್ದಿವೆ. ಕೂಡಲೇ ಅರ್ಹರಿಗೆ ಮಳಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಸ್ತೆ ತಡೆದಿದ್ದಕ್ಕೆ ಸಂಚಾರ ದಟ್ಟಣೆ
ಉರುಳು ಸೇವೆಯ ಮೂಲಕ ಪ್ರತಿಭಟನೆ ಮಾಡಿದ್ದಕ್ಕೆ ಲಕ್ಷ್ಮೀ ಟಾಕೀಜ್ ಬಳಿ ಸಂಚಾರ ದಟ್ಟಣೆ ಆಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಸಮಿತಿ ಅಧ್ಯಕ್ಷ ವಿ. ಭಗವಾನ್, ಶಮಿ, ಮದನ್, ಚಂದ್ರು, ಮಂಜುನಾಥ್, ಯಶೋಧಾ, ಚಂದ್ರಮ್ಮ, ಲತಾ, ರತ್ನಮ್ಮ ಭಾಗವಹಿಸಿದ್ದರು.

https://www.suddikanaja.com/2021/03/08/demand-for-sc-reservation-to-devanga-community/

error: Content is protected !!