ಚಲಿಸುತ್ತಿದ್ದ ಓಮ್ನಿಯಲ್ಲಿ ದಿಢೀರ್ ಬೆಂಕಿ, ಸುಟ್ಟು ಕರಕಲಾದ ವ್ಯಾನ್

 

 

ಸುದ್ದಿ ಕಣಜ.ಕಾಂ |  TALUK |  CRIME NEWS
ಸಾಗರ: ಚಲಿಸುತ್ತಿದ್ದ ಓಮ್ನಿ ವ್ಯಾನಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಸುಟ್ಟು ಕರಕಲಾದ ಘಟನೆ ಸಾಗರ ಸೊರಬ ಮಾರ್ಗದ ಲಿಂಗದಹಳ್ಳಿ ಗ್ರಾಮದ ಸಮೀಪ ಮಂಗಳವಾರ ಸಂಭವಿಸಿದೆ.

ವ್ಯಾನಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡರೂ ಅದೃಷ್ಟವಷಾತ್ ಚಾಲಕ ಜೀವಪಾಯದಿಂದ ಪಾರಾಗಿದ್ದಾನೆ. ವ್ಯಾನಿಗೆ ಬೆಂಕಿ ತಗುಲಿರುವ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಂಕ ಠಾಣಾಧಿಕಾರಿ ಕೆ.ತಿಮ್ಮಪ್ಪ, ಸಿಬ್ಬಂದಿ ಸಂತೋಷ್, ಪ್ರಶಾಂತ್, ಸತೀಶ್ ಸೇರಿದಂತೆ ಇನ್ನಿತರರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ.

error: Content is protected !!