ಅಡಿಕೆ ಧಾರಣೆಗೆ ಅನುಗುಣವಾಗಿ ಸಾಲ ಪ್ರಮಾಣ ಹೆಚ್ಚಿಸಲು ಒತ್ತಾಯ

 

 

ಸುದ್ದಿ ಕಣಜ.ಕಾಂ | DISTRICT | MAMCOS
ಶಿವಮೊಗ್ಗ: ಅಡಿಕೆ ಧಾರಣೆಗೆ ಅನುಗುಣವಾಗಿ ಸಾಲದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ (ಮ್ಯಾಮ್ಕೋಸ್) ಸದಸ್ಯರು ಒತ್ತಾಯಿಸಿದರು.

ಗುರುವಾರ ಮ್ಯಾಮ್ಕೋಸ್ (Malnad Areca Marketing Cooperative Society Ltd.) 81ನೇ ವರ್ಷದ ಸರ್ವ ಸದಸ್ಯರ ಸಭೆ ಜರುಗಿತು. ಈ ವೇಳೆ, ಸದಸ್ಯರು ಮಾತನಾಡಿ, ಅಡಿಕೆ ಧಾರಣೆ ಕ್ವಿಂಟಾಲಿಗೆ 20 ಸಾವಿರ ರೂಪಾಯಿ ಇದ್ದಾಗ ನೀಡುವಷ್ಟೇ ಸಾಲವನ್ನು ಈಗಲೂ ನೀಡಲಾಗುತ್ತಿದೆ. ಸಾಲದ ಪ್ರಮಾಣದಲ್ಲಿ ಏರಿಕೆ ಮಾಡಿಲ್ಲ. ಇದರಿಂದಾಗಿ, ಬೆಳೆಗಾರರು ಸಾಲಕ್ಕೆ ಅಗತ್ಯವಿರುವಷ್ಟು ಅಡಿಕೆಯನ್ನು ಮಾತ್ರ ಮ್ಯಾಮ್ಕೋಸ್ ಗೆ ನೀಡುತ್ತಿದ್ದಾರೆ. ಇನ್ನುಳಿದದ್ದನ್ನು ಖಾಸಗಿ ವರ್ತಕರಿಗೆ ನೀಡುತ್ತಿದ್ದಾರೆ. ಇದರಿಂದಾಗಿ ಸಂಘಕ್ಕೆ ನಷ್ಟವಾಗುತ್ತಿದೆ ಎಂದು ಅಭಿಪ್ರಾಯ ಮಂಡಿಸಲಾಯಿತು. ಇದಕ್ಕೆ ಸ್ಪಂದನೆ ನೀಡಿದ ಅಧ್ಯಕ್ಷರು ಅಗತ್ಯ ಕ್ರಮದ ಭರವಸೆ ನೀಡಿದರು.

ಸಂಘದ ಸದಸ್ಯರು ದೀರ್ಘ ಸಮಯದವರೆಗೆ ಅಡಿಕೆ ದಾಸ್ತಾನು ಮಾಡುತ್ತಿದ್ದಾರೆ. ವ್ಯಾಪಾರಕ್ಕೆ ಹಾಕುವುದು ಮತ್ತು ವಾಪಸ್ ಪಡೆಯುವುದು ಮಾಡುತಿದ್ದಾರೆ. ಇದು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಿಬ್ಬಂದಿಯ ಮೇಲೆಯೂ ಕಾರ್ಯಬಾಹುಳ್ಯ ಹೆಚ್ಚುತ್ತಿದೆ. ಇದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸುವುದು. ಈ ನಿಟ್ಟಿನಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
– ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ

ಅಡಿಕೆ ಸಂಶೋಧನೆಗೆ ನೀಡಬೇಕಿದೆ ಒತ್ತು
ಅಡಿಕೆ ಸಂಶೋಧನೆಗೆ ಅಧಿಕ ಒತ್ತು ನೀಡಬೇಕು. ಸಂಶೋಧನೆಗೆ ವಾರ್ಷಿಕ ಶೇ.3ರಷ್ಟು ಮೀರದಂತೆ ನಿಧಿ ಮೀಸಲು ಇರಿಸಲಾಗುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಂಶೋಧನೆಗಳು ನಡೆಯುತ್ತಿಲ್ಲ ಎಂದು ಸಂಘದ ಸದಸ್ಯ ತಮ್ಮಪ್ಪ ಹೆಗಡೆ ಹೇಳಿದರು.
ಸಭೆಯಲ್ಲಿ ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ನಿರ್ದೇಶಕರಾದ ವೈ.ಎಸ್.ಸುಬ್ರಹ್ಮಣ್ಯ, ಸುರೇಶ್ಚಂದ್ರ, ಸಿ.ಬಿ.ಈಶ್ವರಪ್ಪ, ಬಿ.ಸಿ.ನರೇಂದ್ರ, ಎಂ.ಡಿ ಆರ್.ರಾಘವೇಂದ್ರ ಉಪಸ್ಥಿತರಿದ್ದರು.

https://www.suddikanaja.com/2020/11/11/cm-formula-does-to-increase-the-punishment-act/

error: Content is protected !!