ನಗರದ 50ಕ್ಕೂ ಹೆಚ್ಚು ಲಾಡ್ಜ್ ಗಳ ಮೇಲೆ ಪೊಲೀಸರ ದಿಢೀರ್ ದಾಳಿ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದಲ್ಲಿರುವ 50ಕ್ಕೂ ಅಧಿಕ ಲಾಡ್ಜ್ ಗಳ ಮೇಲೆ ಪೊಲೀಸರು ಬುಧವಾರ ರಾತ್ರಿ ಏಕಾಏಕಿ ದಾಳಿ ಮಾಡಿದ್ದು, ಅನುಮಾನಾಸ್ಪದವಾಗಿ ಕಂಡುಬಂದ ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಅನೈತಿಕ ಚಟುವಟಿಕೆ ಹಾಗೂ ಲಾಡ್ಜ್ ಗಳಲ್ಲಿ ದಾಖಲೆಗಳ ನಿರ್ವಹಣೆಗಳನ್ನು ಪರಿಶೀಲಿಸುವುದಕ್ಕಾಗಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ, ಬಂಗಾರದ ಪಾಲಿಶ್ ಮಾಡುವ ಸಾಮಗ್ರಿಗಳನ್ನು ಹೊಂದಿದ್ದ ಮೂವರು ಸಿಕ್ಕಿದ್ದಾರೆ. ಅವರನ್ನು ವಿಚಾರಣೆ ಮಾಡಿದ ಬಳಿಕ ಅದು ಅವರದ್ದಲ್ಲ ಎನ್ನುವುದು ತಿಳಿದುಬಂದಿದೆ.

ಈ ಮೂವರು ಬಿಹಾರ ಮೂಲದವರಾಗಿದ್ದು ಬಟ್ಟೆ ವ್ಯಾಪಾರಕ್ಕಾಗಿ ಶಿವಮೊಗ್ಗಕ್ಕೆ ಬಂದಿದ್ದು ಲಾಡ್ಜ್ ವೊಂದರಲ್ಲಿ ತಂಗಿದ್ದರು. ಆದರೆ, ಅವರಿಗೂ ಮುನ್ನವೇ ಯಾರೋ ಅಲ್ಲಿದ್ದು ಕೋಣೆ ಖಾಲಿ ಮಾಡುವಾಗ ಸಾಮಗ್ರಿಗಳನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ, ಕೋಣೆ ತಪಾಸಣೆ ಸಂದರ್ಭದಲ್ಲಿ ಅವುಗಳು ಸಿಕ್ಕಿವೆ. ಆದರೆ, ವಿಚಾರಣೆ ನಂತರ ಅದು ಅವರದ್ದಲ್ಲ ಎನ್ನುವುದು ಖಚಿತಗೊಂಡಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ಲಾಡ್ಜ್ ಗಳ ಮೇಲೆ ಕಣ್ಣಿಡಲು ರೇಡ್
ಲಾಡ್ಜ್ ಗಳಲ್ಲಿ ನಡೆಯಬಹುದಾದ ಅನೈತಿಕ ಚಟುವಟಿಕೆಗಳ ಮೇಲೆ ಕಣ್ಣಿಡುವ ಉದ್ದೇಶದಿಂದ ದಾಳಿ ಮಾಡಿದ್ದು, ಲಾಡ್ಜ್ ನಲ್ಲಿ ತಂಗುವವರÀು ಒಂದುವೇಳೆ ಸರಿಯಾದ ದಾಖಲೆ ನೀಡದೇ ಉಳಿದುಕೊಂಡಿದ್ದಲ್ಲಿ ಅಂತಹವರ ಮೇಲೆ ಕ್ರಮಕೈಗೊಳ್ಳಬೇಕೆನ್ನುವ ಕಾರಣಕ್ಕೆ ದಾಳಿ ನಡೆಸಲಾಗಿದೆ. ಇದು ಪೊಲೀಸ್ ಇಲಾಖೆ ನಿರಂತರವಾಗಿ ನಡೆಸುವ ಕಾರ್ಯಾಚರಣೆಯ ಒಂದು ಭಾಗವಷ್ಟೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

https://www.suddikanaja.com/2021/09/11/online-fraud-in-bhadravathi/

error: Content is protected !!