ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ವ್ಯಕ್ತಿ, ಎಫ್.ಐ.ಆರ್ ದಾಖಲು

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಸ್ಮಾರ್ಟ್ ಸಿಟಿಯಿಂದ ಕಾಮಗಾರಿ ನಡೆಯುತ್ತಿರುವ ಗುಂಡಿಯಲ್ಲಿ ಬಿದ್ದ ವ್ಯಕ್ತಿಯೊಬ್ಬರು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದ ಸೆಷನ್ ಕೋರ್ಟ್ ನಲ್ಲಿ ಎಸ್.ಡಿ.ಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಮಾಮ್ ಸಾಬ್ ಎಂಬುವವರು ಠಾಣೆ ಮೆಟ್ಟಿಲೇರಿದ್ದಾರೆ. ಜನವರಿ 27ರಂದು ಮಧ್ಯಾಹ್ನ 2.10 ಗಂಟೆಗೆ ನಾಷನಲ್ ಲಾ ಕಾಲೇಜು ಎದುರು ಹಾಸ್ಟೆಲ್ ಗೆ ಊಟಕ್ಕೆ ಬರುವಾಗ ಕಾಮಗಾರಿ ನಡೆಯುವ ಜಾಗದಲ್ಲಿ ಬ್ಯಾರಿಕೆಡ್, ಸೂಚನಾ ಫಲಕ ಅಳವಡಿಸದ ಕಾರಣಕ್ಕೆ ಗುಂಡಿಗೆ ಬಿದ್ದಿದ್ದಾರೆ.

error: Content is protected !!