ಮಾರಕಾಸ್ತ್ರ ಸಹಿತ ಗಾಂಜಾ ಟೀಂ ಪೊಲೀಸರ ವಶಕ್ಕೆ, ಬಚ್ಚಾ, ರೊಡ್ಡ ಸೇರಿ ಐವರ ಅರೆಸ್ಟ್

 

 

ಸುದ್ದಿ ಕಣಜ.ಕಾಂ‌ | DISTRICT | CRIME NEWS
ಶಿವಮೊಗ್ಗ: ಗಾಂಜಾ ಮಾರಾಟಕ್ಕೆ‌ ಯತ್ನಿಸುತಿದ್ದ ತಂಡವೊಂದನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ತಾಲೂಕಿನ ಕಡೇಕಲ್ ಗ್ರಾಮದಲ್ಲಿ ಶುಕ್ರವಾರ ಬಂಧಿಸಲು ಯಶಸ್ವಿಯಾಗಿದೆ.

READ | ಶಿವಮೊಗ್ಗಕ್ಕೆ ತಮಿಳುನಾಡು ಕಂಟಕ, ಓಂಶಕ್ತಿ ದರ್ಶನ ಪಡೆದು ಬಂದ 6 ಮಂದಿಗೆ ಕೊರೊನಾ ಸೋಂಕು

ಖಚಿತ ಮಾಹಿತಿ ಬಂದಿದ್ದೇ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ‌‌ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿದ್ದು, ಶಿವಮೊಗ್ಗದ ಸೂಳೆಬೈಲಿನವರಾದ ದಾದಾಪೀರ್ ಅಲಿಯಾಸ್ ಬಚ್ಚಾ (24), ಮೊಹಮ್ಮದ್ ಹುಸ್ಮಾನ್ ಅಲಿಯಾಸ್ ರೊಡ್ಡ (24), ಸಲೀಂ (25) ಸಮೀರ್ (22) ಮೆಹಬೂಬ್ ಹಾಗೂ ಪಾಷಾ (25) ಬಂಧಿಸಿದ್ದಾರೆ.
1.40 ಕೆಜಿ ಗಾಂಜಾ ವಶಕ್ಕೆ
ಅಂದಾಜು ₹45,000 ಮೌಲ್ಯದ ಒಟ್ಟು 1 ಕೆಜಿ 120 ಗ್ರಾಂ ಗಾಂಜಾ, 4 ಮಚ್ಚು‌ ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

error: Content is protected !!