ಸುದ್ದಿ ಕಣಜ.ಕಾಂ | DISTRICT | WILD LIFE
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹ ಧಾಮ ಮತ್ತು ಸಫಾರಿ (ಶಿವಮೊಗ್ಗ ಮೃಗಾಲಯ)ದಲ್ಲಿ 10 ವರ್ಷದ ಸಿಂಹಿಣಿ ಮಾನ್ಯ ಮೃತಪಟ್ಟಿದೆ.
ಮೈಸೂರಿನಿಂದ ತರಲಾಗಿದ್ದ ಈ ಸಿಂಹಿಣಿ ಮತ್ತು 16 ವರ್ಷದ ಆರ್ಯ ಎಂಬ ಗಂಡು ಸಿಂಹದ ನಡುವೆ ಜಗಳವಾಗಿದ್ದು, ಸಿಬ್ಬಂದಿ ಪಟಾಕಿ ಸಿಡಿಸಿ ಎರಡನ್ನೂ ಬೇರ್ಪಡಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದರೂ ಮಾನ್ಯ ನಿಧನ ಹೊಂದಿದೆ.