Jobs in Railway, ಎಸ್ಸೆಸ್ಸೆಲ್ಸಿ, ಐಟಿಐ ಪಾಸ್ ಆದವರಿಗೆ ರೈಲ್ವೆನಲ್ಲಿ ಉದ್ಯೋಗ

 

 

ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ಒಡಿಶಾದ ಭುವನೇಶ್ವರದಲ್ಲಿರುವ ಪೂರ್ವ ಕರಾವಳಿ ರೈಲ್ವೆ ನೇಮಕಾತಿ ಸೆಲ್ ನಿಂದ 756 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು.

JOBS FB Linkಅಭ್ಯರ್ಥಿಗಳು ಹೊಂದಿರಬೇಕಾದ ವಯೋಮಿತಿ
ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕನಿಷ್ಠ 15 ವರ್ಷ ತುಂಬಿರಬೇಕು. ಗರಿಷ್ಠ 24 ವರ್ಷವಿರಬೇಕು. ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನರಿಗೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ. ಇನ್ನುಳಿದ ವಯೋಮಿತಿ ಸಡಿಲಿಕೆ ನಿಯಮಾನುಸಾರ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ನೀಡಲಾಗಿದೆ.

READ | Karnataka KSP Recruitment ಡಿಗ್ರಿ ಪಾಸ್ ಆದವರಿಗೆ KSISF ನಲ್ಲಿ 63 ಎಸ್‍ಐ ಹುದ್ದೆ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 08-02-2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07-03-2022

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಕ್ಯಾರಿಯೇಜ್ ರಿಪೇರ್ ವರ್ಕ್‍ಶಾಪ್ ಮಚೇಶ್ವರ್, ಭುವನೇಶ್ವರ್ 190
ಖುರ್ದಾ ರೋಡ್ ಡಿವಿಷನ್  237
ವಾಲ್ ಟೈರ್ ಡಿವಿಷನ್ 263
ಸಂಬಲ್ ಪುರ್ ಡಿವಿಷನ್ 66
ಒಟ್ಟು 756

ಎಸ್ಸೆಸ್ಸೆಲ್ಸಿ/ ಐಟಿಐನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ, ಓಬಿಸಿ ಅಭ್ಯರ್ಥಿಗಳಿಗೆ 100 ರೂಪಾಯಿ ಶುಲ್ಕ, ಎಸ್ಸಿ, ಎಸ್ಟಿ, ಅಂಗವಿಕಲರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬಹುದು.

   NOTIFICATION     CLICK HERE TO APPLY     WEBSITE 

https://www.suddikanaja.com/2021/12/19/jobs-on-iti-at-hindustan-aeronautics-limited/

error: Content is protected !!