ಬೈಕ್ ಕಳ್ಳತನ ಗ್ಯಾಂಗ್ ಅರೆಸ್ಟ್, ಲಕ್ಷಾಂತರ ಮೌಲ್ಯದ ಬೈಕ್‍ಗಳು ಜಪ್ತಿ

 

 

ಸುದ್ದಿ ಕಣಜ.ಕಾಂ | KARNATAKA | CRIME NEWS
ಶಿವಮೊಗ್ಗ: ಹರಿಗೆಯಲ್ಲಿ ಬೈಕ್ ಕಳ್ಳತನ ಮಾಡಿದ ಪ್ರಕರಣದ ತನಿಖೆ ಕೈಗೊಂಡ ಗ್ರಾಮಾಂತರ ಪೊಲೀಸರು ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಶನಿವಾರ ಬಂಧಿಸಿದ್ದಾರೆ.
ವಿನಾಯಕನಗರ 2ನೇ ಕ್ರಾಸ್ ನಿವಾಸಿ ರಾಜಪ್ಪ ಅಲಿಯಾಸ್ ರಾಜಾಹುಲಿ ಅಲಿಯಾಸ್ ಮಂಜಪ್ಪ(36), ರಾಗಿಗುಡ್ಡ ನಿವಾಸಿ ಸೈಯ್ಯದ್ ಸುಬಾನ್ (22), ಕೊಮ್ಮನಾಳು ಗ್ರಾಮ ನಿವಾಸಿ ಮಂಜುನಾಥ್(24) ಬಂಧಿತರು.

READ | ಭದ್ರಾವತಿಯ ಗುಡಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ್ದ ನಾಲ್ವರಿಗೆ ಜೈಲು ಶಿಕ್ಷೆ, ದಂಡ

ವಿವಿಧ ಕಂಪನಿಗಳ 15 ಬೈಕ್ ಸೀಜ್
ಸಾಗರ ಟೌನ್, ಸಾಗರ ಗ್ರಾಮಾಂತರ, ಶಿಕಾರಿಪುರ ಟೌನ್, ಭದ್ರಾವತಿ ಹಳೆನಗರ, ಮಾಳೂರು, ಹೊನ್ನಾಳಿ, ಹರಿಹರ ಟೌನ್, ಮಲೆಬೆನ್ನೂರು, ದಾವಣಗೆರೆ ಮತ್ತು ಹಾವೇರಿ ಟೌನ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ವಿವಿಧ ಕಂಪನಿಯ 3.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 15 ಮೋಟಾರ್ ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೈಕ್ ಕಳ್ಳತನ ಗ್ಯಾಂಗ್ ಸಿಕ್ಕಿದ್ದು ಹೇಗೆ?
2020ರ ಏಪ್ರಿಲ್ 17ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಗೆ ಗ್ರಾಮದ ಮನೆಯೊಂದರಲ್ಲಿ ನಿಲ್ಲಿಸಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ರೊ ದ್ವಿ ಚಕ್ರ ವಾಹನವನ್ನು ಕಳ್ಳತನ ಮಾಡಲಾಗಿತ್ತು. ಐಪಿಸಿ ಕಲಂ 379 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

https://www.suddikanaja.com/2020/11/11/bike-stealing-gang-arrested-in-tunga-nagar-ps/

error: Content is protected !!