ಎಸ್ಸೆಸ್ಸೆಲ್ಸಿ, ಪದವಿ ತೇರ್ಗಡೆಯಾದವರಿಗೆ ಬ್ಯಾಂಕ್ ನಲ್ಲಿ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION 
ಬೆಂಗಳೂರು: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ (ಡಿಸಿಸಿ) ಬ್ಯಾಂಕ್ ನಲ್ಲಿ 71 ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹರು ಮಾರ್ಚ್ 3ರೊಳಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಎಫ್.ಡಿ.ಎ, ಜವಾನ, ಹಿರಿಯ ವ್ಯವಸ್ಥಾಪಕರು, ಕಿರಿಯ ವ್ಯವಸ್ಥಾಪಕರು, ಕ್ಷೇತ್ರಾಧಿಕಾರಿಗಳು, ಕೃಷಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

JOBS FB Link

READ | Jobs in Railway, ಎಸ್ಸೆಸ್ಸೆಲ್ಸಿ, ಐಟಿಐ ಪಾಸ್ ಆದವರಿಗೆ ರೈಲ್ವೆನಲ್ಲಿ ಉದ್ಯೋಗ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ- 15-02-2022
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆ ದಿನ- 03-03-2022
ಶುಲ್ಕ ಪಾವತಿಸಲು ಕೊನೆ ದಿನ- 03-03-2022
ಭರ್ತಿ ಮಾಡಿದ ಅರ್ಜಿಯನ್ನು ಅಟೆಸ್ಟೆಡ್ ಮಾಡಿದ ದಾಖಲಾತಿಗಳೊಂದಿಗೆ ಸಂಚಾಲಕ ಸದಸ್ಯರು, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಸೋಲಾಪುರ ರಸ್ತೆ, ವಿಜಯಪುರ ಇವರ ಹಸರಿಗೆ ಸಲ್ಲಿಸಲು ತಿಳಿಸಲಾಗಿದೆ. ವಯೋಮಿತಿ, ಅರ್ಜಿ ಸಲ್ಲಿಕೆ ವಿಧಾನ ಇತ್ಯಾದಿ ಮಾಹಿತಿಗಳಿಗಾಗಿ ಅಧಿಸೂಚನೆಯನ್ನು ಓದಿ.

ಹುದ್ದೆಯ ಹೆಸರು ಹುದ್ದೆ ಸಂಖ್ಯೆ
ಹಿರಿಯ ವ್ಯವಸ್ಥಾಪಕರು (ಬ್ಯಾಕ್ ಲಾಗ್ 1) 3
ಕಿರಿಯ ವ್ಯವಸ್ಥಾಪಕರು (ಬ್ಯಾಕ್ ಲಾಗ್ 2) 5
ಕಂಪ್ಯೂಟರ್ ಎಂಜಿನಿಯರ್ 1
ಕ್ಷೇತ್ರಾಧಿಕಾರಿಗಳು (ಬ್ಯಾಕ್ ಲಾಗ್ 3) 14
ಕೃಷಿ ಅಭಿವೃದ್ಧಿ ಅಧಿಕಾರಿ 1
ಪ್ರಥಮ ದರ್ಜೆ ಸಹಾಯಕ 20
ಜವಾನ 21
ಸೆಕ್ಯೂರಿಟಿ ಗಾರ್ಡ್ 2
ಕಲ್ಯಾಣ ಕರ್ನಾಟಕ ವೃಂದಕ್ಕೆ ಮೀಸಲಾತಿ
ಕ್ಷೇತ್ರಾಧಿಕಾರಿಗಳು 1
ಪ್ರಥಮ ದರ್ಜೆ ಸಹಾಯಕ 1
ಜವಾನ 2
ಒಟ್ಟು 71

READ | Karnataka KSP Recruitment ಡಿಗ್ರಿ ಪಾಸ್ ಆದವರಿಗೆ KSISF ನಲ್ಲಿ 63 ಎಸ್‍ಐ ಹುದ್ದೆ

ವಿದ್ಯಾರ್ಹತೆ

  • ಹಿರಿಯ ವ್ಯವಸ್ಥಾಪಕರು- ಮಾನ್ಯತೆ ಪಡೆದ ವಿವಿಯಿಂದ ಪದವಿ, ಕಂಪ್ಯೂಟರ್ ಪರಿಜ್ಞಾನ, ಕನಿಷ್ಠ 3 ವರ್ಷ ಬ್ಯಾಂಕ್ ನಲ್ಲಿ ವ್ಯವಸ್ಥಾಪಕ ದರ್ಜೆಯಲ್ಲಿ ಕಾರ್ಯನಿರ್ವಹಣೆ, ಕನಿಷ್ಠ 60ರಷ್ಟು ಅಂಕ, ಎಸ್‍ಸಿ, ಎಸ್ಟಿ ಅಭ್ಯರ್ಥಿಗೆ ಶೇ.45 ಅಂಕ ಗಳಿಸಿರಬೇಕು.
  • ಕಿರಿಯ ವ್ಯವಸ್ಥಾಪಕರು- ಮಾನ್ಯತೆ ಪಡೆದ ವಿವಿಯಿಂದ ಪದವಿ, ಕಂಪ್ಯೂಟರ್ ಪರಿಜ್ಞಾನ, ಕನಿಷ್ಠ 3 ವರ್ಷ ಬ್ಯಾಂಕ್ ನಲ್ಲಿ ಕ್ಷೇತ್ರಾಧಿಕಾರಿಯಾಗಿ ಕಾರ್ಯನಿರ್ವಹಣೆ, ಕನಿಷ್ಠ 60ರಷ್ಟು ಅಂಕ, ಎಸ್‍ಸಿ, ಎಸ್ಟಿ ಅಭ್ಯರ್ಥಿಗೆ ಶೇ.45 ಅಂಕ ಗಳಿಸಿರಬೇಕು.
  • ಕಂಪ್ಯೂಟರ್ ಎಂಜಿನಿಯರ್- ಬಿಇ (ಕಂಪ್ಯೂಟರ್ ಸೈನ್ಸ್/ ಇ ಮತ್ತು ಸಿ)/ ಎಂಸಿಎ, ಕನಿಷ್ಠ 60ರಷ್ಟು ಅಂಕ, ಎಸ್‍ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗೆ ಶೇ.45 ಅಂಕ ಗಳಿಸಿರಬೇಕು.
  • ಕ್ಷೇತ್ರಾಧಿಕಾರಿಗಳು- ಪದವಿ ಕಂಪ್ಯೂಟರ್ ಜ್ಞಾನ, ಕನಿಷ್ಠ 2 ವರ್ಷ ಬ್ಯಾಂಕ್ ನಲ್ಲಿ ಗುಮಾಸ್ತರ ಹುದ್ದೆಯಲ್ಲಿ ಕಾರ್ಯಾನುಭವ, ಕನಿಷ್ಠ 60ರಷ್ಟು ಅಂಕ, ಎಸ್‍ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗೆ ಶೇ.45 ಅಂಕ ಗಳಿಸಿರಬೇಕು.
  • ಕೃಷಿ ಅಭಿವೃದ್ಧಿ ಅಧಿಕಾರಿ- ಬಿಎಸ್ಸಿ ಅಗ್ರಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನ. ಕನಿಷ್ಠ 60ರಷ್ಟು ಅಂಕ ಗಳಿಸಿರಬೇಕು.
  • ಪ್ರಥಮ ದರ್ಜೆ ಸಹಾಯಕ- ಪದವಿ ಪಾಸಾಗಿರಬೇಕು. ಕಂಪ್ಯೂಟರ್ ತರಬೇತಿ ಪಡೆದಿರಬೇಕು, ಸಹಕಾರ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಅರ್ಹತೆ ಮೇಲೆ ಆದ್ಯತೆ ನೀಡಲಾಗುವುದು. ಕನಿಷ್ಠ 60ರಷ್ಟು ಅಂಕ, ಎಸ್‍ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗೆ ಶೇ.45 ಅಂಕ ಗಳಿಸಿರಬೇಕು.
  • ಜವಾನ- ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು, ಹುದ್ದೆಗೆ ಕನಿಷ್ಠ 60 ಅಂಕಗಳನ್ನು ಪಡೆದಿರಬೇಕು. ಎಸ್‍ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗೆ ಶೇ.45 ಅಂಕ ಗಳಿಸಿರಬೇಕು.
  • ಸೆಕ್ಯೂರಿಟಿ ಗಾರ್ಡ್- ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು, ಹುದ್ದೆಗೆ ಕನಿಷ್ಠ 60 ಅಂಕಗಳನ್ನು ಪಡೆದಿರಬೇಕು. ಎಸ್‍ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗೆ ಶೇ.45 ಅಂಕ ಗಳಿಸಿರಬೇಕು.

   NOTIFICATION

WEBSITE

https://www.suddikanaja.com/2021/03/20/creating-fraud-certificate-accused-arrested/

error: Content is protected !!