ಶಿವಮೊಗ್ಗದಿಂದ ದೇಶದ 11 ಮಾರ್ಗಗಳಲ್ಲಿ ವಿಮಾನ ಸಂಚಾರ, ಕೇಂದ್ರ ಸಚಿವರ ಭೇಟಿ ಮಾಡಿದ ಸಂಸದ ರಾಘವೇಂದ್ರ

 

 

ಸುದ್ದಿ ಕಣಜ.ಕಾಂ | NATIONAL | SHIVAMOGGA AIRPORT
ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ನಾಗರಿಕ ವಿಮಾನ ಖಾತೆಯ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ ಅವರನ್ನು ಭೇಟಿ ಮಾಡಿದರು.

SHIVAMOGGA INTERNATIONAL AIRPORT BLUEPRINT VIDEO  

ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದ್ದು, ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ ಉದ್ದವಿರುವ ರನ್ ವೇ (runway) ಹೊಂದಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕ ಭೂಪಟದ ಮಧ್ಯಭಾಗದಲ್ಲಿ ಇರುತ್ತದೆ. ಆದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆದಷ್ಟು ಬೇಗ ಮಲ್ಟಿ ಡಿಸಿಪ್ಲಿನರಿ ಟೀಂ (Multi Disciplinary Team) ಕೂಡಲೇ ಕಳುಹಿಸಿಕೊಡುವುದು. ಎಲೆಕ್ಟ್ರಿಕಲ್ ಎಕ್ವಿಪ್ಮೆಂಟ್ ಫಂಡಿಂಗ್ (Electrical Equipment Funding) ಮತ್ತು RCS UDAN- 4.2 ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಜನರಿಗೆ ದೇಶದ ಮಹಾನಗರಗಳಿಗೆ ಹೋಗಿ ಬರಲು ಮತ್ತು ವ್ಯಾಪಾರ ಹಾಗೂ ಪ್ರವಾಸೋದ್ಯಮ ಸಲುವಾಗಿ ಬರುವ ಪ್ರಯಾಣಿಕರನ್ನು ಉತ್ತೇಜನ ನೀಡುವ ಸಲುವಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಮೂಲಕ ದೇಶದ 11 ಪ್ರಮುಖ ನಗರಗಳ ವಿಮಾನ ನಿಲ್ದಾಣಕ್ಕೆ ಜೋಡಣೆ ಮಾಡುವ ಮಾರ್ಗ ಕಲ್ಪಿಸುವಂತೆ ಸಂಸದರು ಮನವಿ ಮಾಡಿದರು.

ಯಾವ ಮಾರ್ಗಗಳಿಗಾಗಿ ಮನವಿ?
  1. ಮುಂಬೈ- ಶಿವಮೊಗ್ಗ- ಮುಂಬೈ
  2. ಮುಂಬೈ- ಶಿವಮೊಗ್ಗ- ಮಂಗಳೂರು
  3. ಮುಂಬೈ- ಶಿವಮೊಗ್ಗ- ಚೆನ್ನೈ
  4. ಮುಂಬೈ- ಶಿವಮೊಗ್ಗ- ತಿರುಪತಿ
  5. ಶಿವಮೊಗ್ಗ- ಕಲಬುರಗಿ- ಹೈದರಾಬಾದ್
  6. ಶಿವಮೊಗ್ಗ- ಕಲಬುರಗಿ- ದೆಹಲಿ
  7. ಬೆಂಗಳೂರು- ಶಿವಮೊಗ್ಗ-ಬೆಳಗಾವಿ
  8. ಬೆಂಗಳೂರು- ಶಿವಮೊಗ್ಗ- ದೆಹಲಿ
  9. ಕೊಚ್ಚಿ- ಶಿವಮೊಗ್ಗ- ದೆಹಲಿ‌
  10. ಬೆಂಗಳೂರು- ಶಿವಮೊಗ್ಗ- ಗೋವಾ
  11. ಹೈದರಾಬಾದ್- ಶಿವಮೊಗ್ಗ- ಕೊಚ್ಚಿ

ಈ‌ ಮೇಲ್ಕಂಡ ಮಾರ್ಗಗಳನ್ನು ಕೂಡಲೇ ಟೆಂಡರ್ ಕರೆಯುವ ಮೂಲಕ ವಿಮಾನ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

https://www.suddikanaja.com/2022/02/05/industrial-infrastructure-corporation-has-invited-airlines-to-bid-on-the-udan-scheme-fo-shivamogga-international-airport-which-is-the-dream-of-former-cm-bs-yeddyirappa/

error: Content is protected !!