ಶಿವಮೊಗ್ಗದಲ್ಲಿ 3 ಆಟೋ, 2 ಬೈಕ್ ಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷ (28) ಕೊಲೆ‌ ಬೆನ್ನಲ್ಲೇ ನಗರ ಉದ್ವಿಗ್ನಗೊಂಡಿದ್ದು, ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೂ ಕೆಲವೆಡೆ ಮಂಗಳವಾರ ಬೆಳಗ್ಗೆ ವಾಹನಗಳಿಗೆ ಬೆಂಕಿ ಇಟ್ಟಿರುವ ಘಟನೆ ನಡೆದಿದೆ.

READ | ಖಾಕಿ ಕಂಟ್ರೋಲ್ ನಲ್ಲಿ ಶಿವಮೊಗ್ಗ, ಎಷ್ಟು ಜನರ ನಿಯೋಜನೆ

ತುಂಗಾನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಟಿಪ್ಪುನಗರ ಮತ್ತು ಕೊರಮರಕೇರಿ ಏರಿಯಾಗಳಲ್ಲಿ ಮನೆಯ ಎದುರು ನಿಲ್ಲಿಸಿದ್ದ 3 ಆಟೋ ರಿಕ್ಷಾಗಳು ಹಾಗೂ 2 ದ್ವಿ ಚಕ್ರ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ವಾಹನದ ಮಾಲೀಕರು ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 435, 437 ಅನ್ವಯ 3 ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!