ಬೊಮ್ಮನಕಟ್ಟೆಯ ಆಟೋ ಡ್ರೈವರ್ ಮೇಲೆ ಬೀಯರ್ ಬಾಟಲಿಯಿಂದ ಹಲ್ಲೆ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಸವರ್ ಲೈನ್ ನಲ್ಲಿರುವ ಬಾರ್ ವೊಂದರಲ್ಲಿ ಆಟೋ ಚಾಲಕನೊಬ್ಬನಿಗೆ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ.

READ | ಪ್ರಯಾಣಿಕರೇ ಎಚ್ಚರ, ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳರ ಹಾವಳಿ

ಬೊಮ್ಮನಕಟ್ಟೆ ನಿವಾಸಿ ವೇಣುಗೋಪಾಲ್(57) ಗಾಯಗೊಂಡಿರುವ ಆಟೋ ಚಾಲಕ. ಈತ ಸ್ನೇಹಿತ ಪ್ರದೀಪ್ ಎಂಬಾತನೊಂದಿಗೆ ಬಾರ್ ಗೆ ಹೋಗಿದ್ದಾನೆ. ಪ್ರದೀಪ್ ಹೊರಗಡೆ ಹೋದಾಗ ಯಾವುದೋ ವ್ಯಕ್ತಿಯೊಬ್ಬ ಬಂದು ನಿಮ್ಮ ಸಮಯವಾಗಿದೆ ಹೊರಗಡೆ ನಡೆಯಿರಿ ಎಂದು ಹೇಳಿದ್ದಾನೆ. ನನ್ನ ಸ್ನೇಹಿತ ಬಂದ ಬಳಿಕ ಹೋಗುತ್ತೇವೆ ಎಂದು ವೇಣುಗೋಪಾಲ್ ತಿಳಿಸಿದ್ದಾನೆ. ಇಷ್ಟೇ ಕಾರಣಕ್ಕೆ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ ಮಾಡಿದ್ದೇ ವೇಣುಗೋಪಾಲನ ಸ್ನೇಹಿತ ಕೂಡ ಬಂದಿದ್ದಾನೆ. ಆತನನ್ನು ನೋಡಿ ಹಲ್ಲೆ ಮಾಡಿದ ವ್ಯಕ್ತಿ ಪರಾರಿಯಾಗಿದ್ದಾನೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

READ | ಮಾರಿಕಾಂಬ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ಸ್ಟಾಲ್ ನೀಡದಿರುವ ವಿವಾದ, ಸೇವಾ ಸಮಿತಿ ಹೇಳಿದ್ದೇನು, ಇಲ್ಲಿದೆ ಟಾಪ್ 6 ಪಾಯಿಂಟ್ಸ್

error: Content is protected !!