ಜಾವಳ್ಳಿ ಬಳಿ ಟ್ಯಾಂಕರ್ ಪಲ್ಟಿ, ಪೆಟ್ರೋಲ್ ತುಂಬಿಕೊಳ್ಳಲು ಜನರ ನೂಕುನುಗ್ಗಲು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ತಾಲೂಕಿನ ಜಾವಳ್ಳಿ ಸಮೀಪ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ವೊಂದು ಬುಧವಾರ ಪಲ್ಟಿಯಾಗಿದ್ದು, ಜನರು ಜೀವದ ಭಯ ಬಿಟ್ಟು ಪೆಟ್ರೋಲ್ ತುಂಬಿಕೊಂಡ ಘಟನೆ ನಡೆದಿದೆ.

READ | ಹೊಳಲೂರು ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ ಪ್ರಧಾನಿ ಮೋದಿ, ಇನ್ನೇನು ಕಾರ್ಯಕ್ರಮ

ಶಿವಮೊಗ್ಗ ಕಡೆಯಿಂದ ಚನ್ನಗಿರಿ ಭಾಗಕ್ಕೆ ತೆರಳುತಿದ್ದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತಕ್ಷಣ ಜನರು ಪೆಟ್ರೋಲ್ ತುಂಬಿಕೊಳ್ಳಲು ಇಲ್ಲಿಗೆ ಧಾವಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ
ಪೆಟ್ರೋಲ್ ಟ್ಯಾಂಕರ್ ಪಲ್ಟಿ ವಿಚಾರ ಗೊತ್ತಾಗಿದ್ದೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ನಂತರ, ಕ್ರೇನ್ ಸಹಾಯದಿಂದ ವಾಹನವನ್ನು ಮೇಲೆತ್ತಿದ್ದಾರೆ.

error: Content is protected !!