ಶಿವಮೊಗ್ಗದ ಹಲವೆಡೆ ಎರಡು ದಿನ ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8 ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 10ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ವೀರಣ್ಣ ಲೇಔಟ್, ವಿದಾತ್ರಿ ಭವನ, ಸೋಮಿನಕೊಪ್ಪ ರಸ್ತೆ, ವಿನೋದ ನಗರ 6ನೇ ಹಂತ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

READ | Today Gold Rate ಬಂಗಾರದ ಬೆಲೆಯಲ್ಲಿ ದಾಖಲೆಯ ಏರಿಕೆ, 9 ದಿನಗಳ ರೇಟ್ ಇಲ್ಲಿದೆ

11ರಂದು ವಿದ್ಯುತ್ ವ್ಯತ್ಯಯ
ನಗರ ಉಪವಿಭಾಗ-2ರ ಘಟಕ-5 ಮತ್ತು ಘಟಕ-6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಹಾಗೂ ಮಂಡ್ಲಿ ವಿವಿ ಕೇಂದ್ರದಲ್ಲಿ ಪರಿವರ್ತಕ ಬದಲಾವಣೆ ಇರುವ ಕಾರಣ ಕೆಳಕಂಡ ಪ್ರದೇಶಗಳಲ್ಲಿ ಮಾ.11 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಪಿಯರ್‍ಲೈಟ್ ಪೇಪರ್ ಪ್ಯಾಕೇಜ್, ಕೆ.ಆರ್ ಕುಡಿಯುವ ನೀರಿನ ಸ್ಥಾವರ, ಶಂಕರ್‌ ರೈಸ್ ಮಿಲ್, ಮಂಡ್ಲಿ ಸರ್ಕಲ್, ಜಗ್ಗಣ್ಣ ಕ್ಯಾಂಟಿನ್, ಶಿವಶಂಕರ್ ರೈಸ್‍ಮಿಲ್, ಭವಾನಿ ರೈಸ್‍ಮಿಲ್, ಬೈಪಾಸ್ ರಸ್ತೆ, ಕಾಮತ್ ಪೆಟ್ರೋಲ್ ಬಂಕ್, ಸೀಗೆಹಟ್ಟಿ, ರವಿವರ್ಮ ಬೀದಿ, ಆಜಾದ್‍ ನಗರ, ಪಂಚವಟಿ ಕಾಲೋನಿ, ಕೃಷಿ ಇಲಾಖೆ, ಓಟಿ ರಸ್ತೆ, ಎನ್‍ಟಿ ರಸ್ತೆ, ಬಿ.ಹೆಚ್.ರಸ್ತೆ, ಗಾರ್ಡನ್ ಏರಿಯಾ, ಸಿಟಿ ಸೆಂಟರ್, ಖಾಸಗಿ ಬಸ್ ನಿಲ್ದಾಣ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಶಿವಪ್ಪನಾಯಕ ಸರ್ಕಲ್, ಕೆ.ಆರ್.ಪುರಂ, ಶಂಕರನಾರಾಯಣ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಆರ್.ಎಂ.ಎಲ್.ನಗರ 1ನೇ ಹಂತ ಹಾಗೂ 2ನೇ ಹಂತ, ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರಿ, ಇಲಿಯಾಜ್ ನಗರ 1ನೇ ಕ್ರಾಸ್‍ನಿಂದ 13 ನೇ ಕ್ರಾಸ್, ಸಿದ್ದೇಶ್ವರ ಸರ್ಕಲ್, ಫಾರೂಕ್ಯ ಶಾದಿಮಹಲ್, ತುಂಗಾನಗರ ಆಸ್ಪತ್ರೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹೆಚ್‍ಬಿ ಕಾಲೋನಿ, ಮಂಡಕ್ಕಿ ಭಟ್ಟಿ, ಮೇಲಿನ ತುಂಗಾನಗರ, ಕೆಳಗಿನ ತುಂಗಾನಗರ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿನಗರ 80 ಅಡಿ ರಸ್ತೆ, ಕಾಮತ್ ಲೇಔಟ್, ಹಳೇ ಗೋಪಿಶೆಟ್ಟಿಕೊಪ್ಪ, ಅಣ್ಣಾನಗರ, ಮಲ್ಲಿಕಾರ್ಜುನ ಬಡಾವಣೆ, ಮಂಜುನಾಥ ಬಡಾವಣೆ, ಮಿಳಘಟ್ಟ, ಆನಂದರಾವ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಫ್-05-ಗಾಜನೂರು ರೂರಲ್, ಎಫ್-08 ರಾಮಿನಕೊಪ್ಪ, ಎಫ್-06 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಎಫ್-17-ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

https://www.suddikanaja.com/2021/07/03/accused-arrested-5/

error: Content is protected !!