ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಯುವಕರಿಂದ ನೈತಿಕ ಪೊಲೀಸ್ ಗಿರಿ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಬಿಎಡ್ ಕೋರ್ಸ್ ಸಂಬಂಧಿಸಿದಂತೆ ಡಾಕ್ಯೂಮೆಂಟರಿ ಮಾಡುವುದಕ್ಕಾಗಿ ಶಿವಮೊಗ್ಗ ನಗರಕ್ಕೆ ಆಗಮಿಸಿದ ಯುವತಿ ಮತ್ತು ಯುವಕನ ಮೇಲೆ ಹಲ್ಲೆಗೆ ಯತ್ನಿಸಿ ನೈತಿಕ ಪೊಲೀಸ್ ಗಿರಿ ಮಾಡಲಾಗಿದೆ.
ಚಿತ್ರದುರ್ಗದ ಚಳ್ಳಕೆರೆಯಿಂದ ನಗರದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಮಾರ್ಚ್ 29ರ ಸಂಜೆ ಆಗಮಿಸಿದ್ದು, ಆಗ ಗುಂಪೊಂದು ವಿಚಾರಿಸಲು ಆರಂಭಿಸಿದೆ. ಅನ್ಯಕೋಮಿನ ಹುಡುಗಿಯನ್ನು ಕರೆದುಕೊಂಡು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಅಶ್ಲೀಲವಾಗಿ ಬೈಯ್ದದಿದ್ದಾರೆ. ತಳ್ಳಾಡಿದ್ದಾರೆ.

READ | ದೂರಶಿಕ್ಷಣ ಫಲಿತಾಂಶ ಹಿಂಪಡೆದ ಕುವೆಂಪು ವಿಶ್ವವಿದ್ಯಾಲಯ, ಮರುಪರೀಕ್ಷೆಗೆ ಡೇಟ್ ಫಿಕ್ಸ್

ಜನರನ್ನು ಕಂಡು ಓಡಿಹೋದ ಗುಂಪು
ಯುವಕ ಮತ್ತು ಯುವತಿ ಚಳ್ಳಕೆರೆಯಿಂದ ಕುಪ್ಪಳಿಗೆ ಹೋಗುವುದಕ್ಕಾಗಿ ಬಸ್ ನಲ್ಲಿ ಬಂದಿದ್ದು, ಶಿವಮೊಗ್ಗ ನಿಲ್ದಾಣದಲ್ಲಿ ಇಳಿದಿದ್ದಾರೆ. ಆಗ 6-7 ಜನ ಯುವಕರ ಗುಂಪೊಂದು ಯುವಕ ಮತ್ತು ಯುವತಿಯನ್ನು ಕಂಡು ಬಸ್ ನಿಲ್ದಾಣದೊಳಗೆ ಬಂದಿದೆ. ಅವರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದೆ. ತಕ್ಷಣ ನಿಲ್ದಾಣದಲ್ಲಿದ್ದ ಜನರು ಬಂದಿದ್ದಕ್ಕೆ ಅವರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಅದೇ ರಾತ್ರಿ ಪ್ರಕರಣ ದಾಖಲಾಗಿದೆ.

error: Content is protected !!