ಶಿವಮೊಗ್ಗ ಡಿಸಿ‌ ಕಚೇರಿ ಎದುರು ದಿಢೀರ್ ಪ್ರತಿಭಟನೆ ಮಾಡಿದ ಸಾಗರದ ರೈತರು

 

 

ಸುದ್ದಿ ಕಣಜ. ಕಾಂ | DISTRICT | FARMERS PROTEST
ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ಸಾಗರದ ಪದಾಧಿಕಾರಿಗಳು ಮಂಗಳವಾರ ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ‌ ಸಲ್ಲಿಸಲಾಯಿತು.

READ | ರಸ್ತೆಯ ತುಂಬ ಚೆಲ್ಲಿದ ಡೀಸೆಲ್, ತಪ್ಪಿದ ಭಾರೀ ದುರಂತ

ಬೇಡಿಕೆಗಳೇನು?

  1. ರಾಜ್ಯದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ ದವಸ ಧಾನ್ಯಗಳ ಖರೀದಿಗೆ ಕೂಡಲೇ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಬೇಕು
  2. ಈಗಾಗಲೇ ಬೇಸಿಗೆ ಆರಂಭವಾಗಿದ್ದು, ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಬೆಳೆಗಳೆಲ್ಲ ಒಣಗಿ ಹೋಗಿವೆ. ಮನೆ ವಿದ್ಯುತ್ ಬಿಲ್ ಕೂಡ ಹೆಚ್ಚಿಸಲಾಗಿದೆ. ತಕ್ಷಣವೇ ವಿದ್ಯುತ್ ಬೆಲೆಯನ್ನು ಇಳಿಸಬೇಕು.
  3. ರಾಜ್ಯದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು. ಬೆಂಬಲ ಬೆಲೆಯಲ್ಲಿ ಖರೀದಿಸುವ ಬೆಲೆಯನ್ನು ಪುನರ್ ಪರಿಶೀಲನೆ ಮಾಡಬೇಕು.
  4. ಶರಾವತಿ ವಿದ್ಯುತ್ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಮೂಲಸೌಲಭ್ಯಗಳನ್ನು ನೀಡಬೇಕು. ಭೂಮಿಯ ಹಕ್ಕು ಕೊಡಬೇಕು.
  5. ಸಾಗರ ತಾಲ್ಲೂಕಿನ ಬಾರಂಗಿ, ಬಾನುಕುಳಿ, ಉರುಳುಗಲ್ಲು ಮುಂತಾದ ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಕೂಡಲೇ ಸಂಪರ್ಕ ಕಲ್ಪಿಸಿ‌.
  6. ಕೆಳದಿ ಭೀಮೇಶ್ವರ ದೇವಸ್ಥಾನ, ನಾಯಕನಕೋಟೆ, ಪುರಾತನ ಆಂಜನೇಯ ದೇವಸ್ಥಾನ, ಐತಿಹಾಸಿಕ ಗೋವರ್ಧನಗಿರಿ ಕೋಟೆ ಮುಂತಾದ ಪಾರಂಪರಿಕ, ಐತಿಹಾಸಿಕ ಸ್ಥಳಗಳ ರಕ್ಷಣೆಯಾಗಬೇಕು. ಕಾನೂರಿನಿಂದ ಗೇರುಸೊಪ್ಪೆಯವರೆಗೂ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಎಸ್. ಶಿವಾನಂದ್ ಕುಗ್ವೆ, ಪ್ರಮುಖರಾದ ಎನ್.ಡಿ. ವಸಂತಕುಮಾರ್, ರವಿ ಬಿಳಿಸಿರಿ, ರಮೇಶ್ ಐಗಿನಬೈಲು, ಎಂ.ಬಿ. ಮಂಜಪ್ಪ, ಲಕ್ಷ್ಮಣ ಹೆಬ್ಬನಕೇರಿ, ನಾಗರಾಜ್ ಸಾಲ್ಕೋಡ್, ಬಿಲ್ಲಂದೂರು ತ್ಯಾಗಮೂರ್ತಿ ಉಪಸ್ಥಿತರಿದ್ದರು.

error: Content is protected !!