ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಚಿವ ಈಶ್ವರಪ್ಪ ತುರ್ತು ಮಾಧ್ಯಮಗೋಷ್ಠಿ, ಅವರು ಹೇಳಿದ್ದೇನು, ಇಲ್ಲಿವೆ ಟಾಪ್ ಪಾಯಿಂಟ್ಸ್

 

 

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ತುರ್ತು ಮಾಧ್ಯಮಗೋಷ್ಠಿ ಕರೆದು ಮಾತನಾಡಿದರು. ವಿಪಕ್ಷದವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿರುವ ಈಶ್ವರಪ್ಪ ಅವುಗಳಿಗೆ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.

READ | ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸ್ವಕ್ಷೇತ್ರದಲ್ಲೇ ಭುಗಿಲೆದ್ದ ಆಕ್ರೋಶ, ಕೋಟೆ ಪೊಲೀಸ್ ಠಾಣೆಗೆ ದೂರು

  • ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಆ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭಯ ಪಡುವ ಅಗತ್ಯವಿಲ್ಲ ಎಂಬ ಭರವಸೆ ನೀಡಿದ್ದಾರೆ.
  • ರಾಜೀನಾಮೆ ನೀಡುವಂತೆ ರಾಜ್ಯದಾದ್ಯಂತ ಆಗ್ರಹಿಸಲಾಗುತ್ತಿದೆ. ಆದರೆ, ಅಭಿಮಾನಿಗಳು ಕರೆ ಮಾಡಿ ಯಾವ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಅವರಿಗೆ ನಾನು ಋಣಿ
  • ಖುದ್ದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರೇ ಕರೆ ಮಾಡಿದ್ದರು. ಅವರೇ ಇದನ್ನು ಷಡ್ಯಂತ್ರ ಎಂದು ಹೇಳಿದ್ದಾರೆ.
  • ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಬಹುಶಃ ಅದಕ್ಕಾಗಿ ಅವರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ.
  • ಸಂತೋಷ್ ಆತ್ಮಹತ್ಯೆ ಹಾಗೂ ಇದರ ಹಿಂದೆ ನಡೆದಿರುವ ಷಡ್ಯಂತ್ರದ ಬಗ್ಗೆ ಆಮೂಲಾಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಯಾವ ಕಾರಣವೂ ಇಲ್ಲದೇ ಆಧಾರ ರಹಿತವಾಗಿ ಆರೋಪಿ ರಾಜೀನಾಮೆ ಕೇಳಿದರೆ ನೀಡುವುದಿಲ್ಲ

READ | ಚಿನ್ನಾಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್, 53 ಸಾವಿರ ಗಡಿದಾಟಿದ ಅಪರಂಜಿಯ ಬೆಲೆ

ಈ ಪ್ರಶ್ನೆಗಳಿಗೆ ಉತ್ತರಿಸಿ, ನಂತರ ಪ್ರತಿಭಟನೆ ಮಾಡಿ

  1. ಯಾವುದೇ ಕಾಮಗಾರಿ ಆಗಬೇಕಾದರೆ ಅದಕ್ಕೆ ಕೆಲವೊಂದು ನಿಯಮಗಳಿವೆ. ಅದರಂತೆ, ಕಾಮಗಾರಿಗೆ ಆಡಳಿತಾತ್ಮಕ, ತಾಂತ್ರಿಕ ಅನುಮೋದನೆ ಬೇಕು. ಆದರೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಅಂತಹದ್ದೇನನ್ನೂ ಪಾಲಿಸಿಯೇ ಇಲ್ಲ. ಅದಕ್ಕೆ ಅನುದಾನ ನೀಡಲು ಹೇಗೆ ಸಾಧ್ಯ?
  2. ಗಣಪತಿ ಪ್ರಕರಣದಲ್ಲಿ ಅವರೇ ಖುದ್ದು ಬರೆದು ಹಸ್ತಾಕ್ಷರ ಮಾಡಿದ್ದ ಪತ್ರವಿತ್ತು. ಅದನ್ನು ಡೆತ್ ನೋಟ್ ಎನ್ನಬಹುದು. ಆದರೆ, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ ನೋಟ್ ಎನ್ನಲಾಗುತ್ತಿರುವ ವಾಟ್ಸಾಪ್ ಸಂದೇಶವನ್ನು ಡೆತ್ ನೋಟ್ ಎನ್ನಲಾದೀತೇ?
  3. ಸಂತೋಷ್ ಬಡವ ಎಂದು ಹೇಳಿಕೊಂಡಿದ್ದಾರೆ. ಒಂದುವೇಳೆ, ಅದು ನಿಜವಾಗಿದ್ದರೆ ಅವರು ದೆಹಲಿಗೆ ಹೋಗಲು ಟಿಕೆಟ್ ತೆಗೆಸಿದವರು ಯಾರು?

error: Content is protected !!