ಯುಗಾದಿ ಹಬ್ಬದಂದು ಚಿನ್ನ, ಬೆಳ್ಳಿಯ ಬೆಲೆ ಅಗ್ಗ

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಯುಗಾದಿ ಹಬ್ಬದ ದಿನ ಚಿನ್ನ ಮತ್ತು ಬೆಳ್ಳಿ ಆಭರಣ ಪ್ರಿಯರಿಗೆ ಶುಭ ಸುದ್ದಿ ಇದೆ. ಇಂದು ಬಂಗಾರದ ಬೆಲೆಯು ಪ್ರತಿ 10 ಗ್ರಾಂ ಅಪರಂಜಿಗೆ 160 ರೂಪಾಯಿ ಇಳಿಕೆಯಾಗಿದೆ. ಶುಕ್ರವಾರವೊಂದೇ ದಿನ ಬೆಲೆಯು 490 ರೂ. ಹೆಚ್ಚಳವಾಗಿತ್ತು. ಈಗ ಮತ್ತೆ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯು 47,950 ರೂ ಹಾಗೂ 24 ಕ್ಯಾ.ಗೆ 52,310 ರೂ. ನಿಗದಿಯಾಗಿದೆ.

READ | ಮಾನವೀಯತೆ ಮೆರೆದ ಭಜರಂಗ ದಳ ಕಾರ್ಯಕರ್ತ ಹಿಂದೂ ಹರ್ಷನ ಕುಟುಂಬ, ವಿಶ್ವನಾಥ್ ಶೆಟ್ಟಿ ಪುತ್ರನಿಗೆ ಭೇಟಿ, ಕಾರಣವೇನು?

ಬೆಳ್ಳಿಯ ಬೆಲೆಯೂ ಇಳಿಕೆ
ಮಾ.26ರಿಂದ ಈಚೆಗೆ ಬೆಳ್ಳಿಯ ದರವು ಇಳಿಕೆಯಾಗುತ್ತಲೇ ಸಾಗಿತ್ತು. ಆದರೆ, ಏಪ್ರಿಲ್ 1ರಂದು ಕೆಜಿಗೆ 400 ಹೆಚ್ಚಳವಾಗಿತ್ತು. ಆದರೆ, ಶನಿವಾರ 400 ರೂ. ಇಳಿಕೆಯಾಗಿದೆ. ಪ್ರತಿ ಕೆಜಿಗೆ 71,300 ರೂ. ನಿಗದಿಯಾಗಿದೆ.

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ(ಕೆಜಿ)
ಮಾರ್ಚ್ 30 47,650 51,980 72,100
ಮಾರ್ಚ್ 31 47,640 51,970 71,900
ಏಪ್ರಿಲ್ 01 48,100 52,470 71,700
ಏಪ್ರಿಲ್ 02 47,950 52,310 71,300

error: Content is protected !!