ರಾಜ್ಯ ಸರ್ಕಾರದ ವಿರುದ್ಧ ಎಚ್.ಎಸ್.ಸುಂದರೇಶ್ ಗಂಭೀರ ಆರೋಪ

 

 

ಸುದ್ದಿ ಕಣಜ.ಕಾಂ | CITY | POLITICAL NEWS
ಶಿವಮೊಗ್ಗ: ಸಹಕಾರ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಅಡ್ಡದಾರಿ ಚುನಾವಣೆಗಳ ನಡೆಸುವ ಮೂಲಕ ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಆರೋಪಿಸಿದರು.
ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಮುಲ್ ಅಧ್ಯಕ್ಷರ ಚುನಾವಣೆ ಮತ್ತು ಶಿವಮೊಗ್ಗ ಟಿಎಪಿಸಿಎಂಸಿ ಸಾಮಾಣ್ಯ ಹುದ್ದೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳು ನಿರ್ದೇಶಕರನ್ನೇ ಅನರ್ಹಗೊಳಿಸಿದರು. ಅದೇರೀತಿ, ಆರ್.ಎಂ.ಮಂಜುನಾಥಗೌಡ ಅವರ ನಾಮಪತ್ರವನ್ನು ತಿರಸ್ಕರಿಸಿದರು. ಇದೆಲ್ಲ ಅಧಿಕಾರ ಹಿಡಿಯುವ ಕುತಂತ್ರ ಎಂದು ಟೀಕಿಸಿದರು.

READ | ವೀರಶೈವ ಲಿಂಗಾಯತ ಸಮುದಾಯಕ್ಕೆ ಕಿವಿಮಾತು ಹೇಳಿದ ಸಂಸದ ಬಿ.ವೈ.ರಾಘವೇಂದ್ರ

ನಿವೃತ್ತ ನ್ಯಾಯಾಧೀಶರಿಂದ ತನಿಖೆ ಕೈಗೊಳ್ಳಿ
ಆರೋಗ್ಯ, ಶಿಕ್ಷಣ, ಪೊಲೀಸ್, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳು ಅವ್ಯವಸ್ಥೆ ಆಗರವಾಗಿವೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿಮುಲ್ ಪ್ರಭಾರ ಅಧ್ಯಕ್ಷ ಬಸಪ್ಪ, ನಿರ್ದೇಶಕ ಶಿವಶಂಕರ್ ಮಾತನಾಡಿದರು. ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ್, ಚಂದನ್, ರಾಮೇಗೌಡ, ಚಂದ್ರಶೇಖರ್, ವಿಶ್ವನಾಥ ಕಾಶಿ ಉಪಸ್ಥಿತರಿದ್ದರು.

error: Content is protected !!