ಒಂದು ಪ್ರಕರಣದೊಂದಿಗೆ‌ ಇನ್ನೆರಡು ಕಳ್ಳತನ ಕೇಸ್ ಗಳನ್ನು ‌ಭೇದಿಸಿದ ಪೊಲೀಸ್

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿಕಾರಿಪುರ: ಚನ್ನಕೇಶವ ನಗರದ ವಾಸಿಯೊಬ್ಬರ ಮನೆಯ ಬೀಗ ಮುರಿದು ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ.
ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಯುವರಾಜ್ (24) ಬಂಧಿತ. ಮೇ 13ರಂದು ನಡೆದ ಕಳ್ಳತನ ಪ್ರಕರಣದ ತನಿಖೆ‌ ವೇಳೆ‌ ಶಿಕಾರಿಪುರ ಟೌನ್ ಠಾಣೆಯ ಎರಡು ಪ್ರಕರಣಗಳನ್ನು‌ ಸಹ‌ ಭೇದಿಸಿದ್ದಾರೆ.

READ | ರಕ್ಷಣೆಗೆಂದು‌ ನೇಮಿಸಿದ ಕಾವಲುಗಾರನಿಂದಲೇ ಲಕ್ಷಾಂತರ ಮೌಲ್ಯದ ನಾಟಾ ಸಾಗಣೆ,‌ ಇಬ್ಬರು ಅರೆಸ್ಟ್

ಬೇರೆಯ ಕಳ್ಳತನ ಪ್ರಕರಣಕ್ಕೂ‌ ಲಿಂಕ್
ಶಿಕಾರಿಪುರ ಟೌನ್ ಠಾಣೆಯ 2 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ₹78,000 ಮೌಲ್ಯದ ಒಟ್ಟು 7.46 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 300 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಕ್ಕೆ‌ ಪಡೆದಿದ್ದಾರೆ. ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿಯ ತಂಡ ಪ್ರಕರಣದ ತನಿಖೆ ಕೈಗೊಂಡಿದೆ.

Leave a Reply

Your email address will not be published.