ಬೈಕ್ ಅಡ್ಡಗಟ್ಟಿ ಫೋನ್ ಪೇ ಮೂಲಕ ಹಣ ದರೋಡೆ!

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಇದುವರೆಗೆ ದರೋಡೆಕೋರರು ವ್ಯಕ್ತಿಯ ಬಳಿ ನಗದು, ಚಿನ್ನಾಭರಣ, ಮೊಬೈಲ್ ಗಳನ್ನು ಮಾತ್ರ ದೋಚುತಿದ್ದರು. ಆದರೆ, ಇತ್ತೀಚೆಗೆ ಅಮೀರ್ ಅಹ್ಮದ್ ಕಾಲೋನಿ ಬಳಿ ನಡೆದ ಘಟನೆಯಲ್ಲಿ ಫೋನ್ ಪೇ ಮೂಲಕ ಸಹ ಹಣ ದೋಚಲಾಗಿದೆ!
ತಾಲೂಕಿನ ಹೊಯ್ಸನಹಳ್ಳಿಯ ವಿಜಯಕುಮಾರ್(24) ಎಂಬುವವರ ಬಳಿಯಿಂದ ಹಣ ದೋಚಲಾಗಿದ್ದು, ಠಾಣೆಗೆ ದೂರು ನೀಡಲಾಗಿದೆ.
ನಡೆದಿದ್ದೇನು?
ಸವಳಂಗ ರಸ್ತೆಯಲ್ಲಿರುವ ಉದ್ದಿಮೆಯೊಂದರಲ್ಲಿ ರಾತ್ರಿ ಪಾಳಿ ಮುಗಿಸಿ ಮನೆಗೆ ತೆರಳುತಿದ್ದಾಗ ಅಮೀರ್ ಅಹ್ಮದ್ ಕಾಲೋನಿ ಬಳಿ ನಾಲ್ವರು ಯುವಕರು ಬೈಕ್ ಅನ್ನು ಅಡ್ಡಗಟ್ಟಿದ್ದಾರೆ. ನಂತರ, ವಿಜಯಕುಮಾರ್ ಬಳಿಯಿದ್ದ ನಗದು, ಚಿನ್ನದ ಸರವನ್ನು ದೋಚಿಸಿದ್ದಾರೆ. ಇಷ್ಟಕ್ಕೆ ಸಾಕಾಗದೇ ಫೋನ್ ಪೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ಸಹ ವರ್ಗಾಯಿಸಿಕೊಂಡಿದ್ದಾರೆ.

Leave a Reply

Your email address will not be published.