ಮಕ್ಕಳು ಕೂಡಿಟ್ಟ ಹಣವನ್ನೂ ಬಿಡದ ಖದೀಮರು

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ತಾಲೂಕಿನ ಮೇಲಿನಕುರುವಳ್ಳಿಯ ವಿಠ್ಠಲನಗರ ಮನೆಯೊಂದರಲ್ಲಿ ಬುಧವಾರ ಬೆಳಗ್ಗೆ ಕಳ್ಳತನ ಮಾಡಲಾಗಿದ್ದು, ಮಕ್ಕಳು‌ ಕೂಡಿಟ್ಟ ಹಣವನ್ನೂ ಖದೀಮರು ಬಿಟ್ಟಿಲ್ಲ.
ಡ್ರೈವರ್ ಶ್ರೀಧರ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದು, ಬೀಗವನ್ನು ಒಡೆದು ಒಳಗೆ ಪ್ರವೇಶಿದ ಕಳ್ಳರು ಬೆಲೆ ಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಅಂತಹದ್ದೇನೂ ಸಿಕ್ಕಿಲ್ಲ. ಕೊನೆಗೆ ಕಾಣಿಕೆ ಡಬ್ಬಿ ಮತ್ತು ಮಕ್ಕಳು ಡಬ್ಬಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಸಹ ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

READ | ಶಿವಮೊಗ್ಗದಲ್ಲಿ‌ ಇನ್ಮುಂದೆ‌ ಮರಳು‌ ಬಳಕೆ‌ ಮೇಲೆ ಹದ್ದಿನ ಕಣ್ಣು

Leave a Reply

Your email address will not be published.