ಶಿವಮೊಗ್ಗದಲ್ಲಿ ಸರಗಳ್ಳತನ ಮಾಡುತಿದ್ದ ರಾಜಸ್ಥಾನ ಮೂಲದ ಮೂವರು ಅರೆಸ್ಟ್, ಅವರ ಮೇಲಿತ್ತು ರಾಶಿ ರಾಶಿ‌ ಕೇಸ್

Theft

 

 

ಸುದ್ದಿ ಕಣಜ.ಕಾಂ‌ | DISTRICT | CRIME NEWS
ಶಿವಮೊಗ್ಗ: ನಗರದಲ್ಲಿ‌ ಸರಗಳ್ಳತನ, ಬೈಕ್‌ ಕಳ್ಳತನದಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಗುಂಪನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಗುರುವಾರ ಸಫಲವಾಗಿದೆ.
ರಾಜಸ್ಥಾನದ ಚಾಲೋರ್ ಜಿಲ್ಲೆಯ ಸ್ಯಾಂಚೋರ್ ತಾಲೂಕಿನ‌ ಬಾಲರ್ವ ಗ್ರಾಮ ನಿವಾಸಿ ಅಶೋಕ್ ಕುಮಾರ್(24), ಕಿಲೋಪಿಯಾ ಗ್ರಾಮದ ಅಶ್ವಿನ್ ಪ್ರಜಾಪತಿ(23) ಎಂಬುವವರನ್ನು ಮೇ 28ರಂದು‌ ಬಂಧಿಸಲಾಗಿತ್ತು. ಗುರುವಾರದಂದು ರಾಜಸ್ಥಾನದ ಪರಾವ ಗ್ರಾಮ ನಿವಾಸಿ ವಿಕಾಸ್ ಕುಮಾರ್(22) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಿಂದ 225 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಎರಡು ದ್ವಿ ಚಕ್ರ ವಾಹನಗಳನ್ನು ಸೀಜ್ ಪಡೆಯಲಾಗಿದೆ.

READ | ಚಕ್ರತೀರ್ಥರ ತಂಟೆಗೆ ಬಂದರೆ ನಿಮ್ಮ ‘ಚಕ್ರ’ವೇ ಬದಲಾಗಲಿದೆ, ಕಸಾಪ ಅಧ್ಯಕ್ಷರಿಗೆ ವಾರ್ನಿಂಗ್

ಒಂದು ಕೇಸ್ ಬೇಧಿಸಲು ಹೋಗಿ ರಾಶಿ ರಾಶಿ ಕೇಸ್ ಪತ್ತೆ
ನಗರದ ಶೇಷಾದ್ರಿಪುರಂ ಬಳಿ ಮಹಿಳೆಯೊಬ್ಬರ ಕೊರಳಿನಿಂದ ಬಂಗಾರದ ಸರವನ್ನು ಬೈಕ್ ನಲ್ಲಿ ಬಂದ‌ ಅಪರಿಚಿತರು ದೋಚಿದ್ದರು. ಆರೋಪಿಗಳ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ 2, ವಿನೋಬನಗರದಲ್ಲಿ 2, ದೊಡ್ಡಪೇಟೆಯಲ್ಲಿ 1 ಮತ್ತು ತುಂಗಾನಗರ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 6 ಸರಗಳ್ಳತನ ಹಾಗೂ ಕೋಟೆ ಠಾಣೆಯಲ್ಲಿ ಮತ್ತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ತಲಾ 1 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.

https://suddikanaja.com/2020/12/18/deer-hunting-in-sharavathi-wildlife-sanctuary-shivamogga/

Leave a Reply

Your email address will not be published. Required fields are marked *

error: Content is protected !!