ಶಿವಮೊಗ್ಗದಲ್ಲಿ ಇದೇ ಮೊದಲ ಸಲ ಈ ಸ್ಪರ್ಧೆ ಆಯೋಜನೆ, ನಾನಾ ರಾಜ್ಯಗಳಿಂದ ಬರಲಿದ್ದಾರೆ ಕ್ರೀಡಾಪಟುಗಳು

pencak silat game

 

 

ಸುದ್ದಿ ಕಣಜ.ಕಾಂ | DISTRICT | SPORTS NEWS
ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿರುವ ಒಳಾಂಗಣದಲ್ಲಿ ಜುಲೈ 25 ಮತ್ತು‌ 26 ರಂದು ಮೂರನೇ ದಕ್ಷಿಣ ರಾಜ್ಯಗಳ ಪೆಂಕಾಕ್ ಸಿಲತ್ (pencak silat) ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ್ ಹಂಚಿನಾಲ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಪೆಂಕಾಕ್ ಸಿಲತ್ ಕ್ರೀಡೆಯು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದು, ಬಾಲಕ, ಬಾಲಕಿಯರ, ಪುರುಷರ ಮತ್ತು ಮಹಿಳೆಯರ ಹಾಗೂ ಪೊಲೀಸ್ ಟೀಂಗಳು ಭಾಗವಹಿಸಲಿವೆ.‌ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಪುದುಚೆರಿ, ಲಕ್ಷದ್ವೀಪ, ಆಂಧ್ರಪ್ರದೇಶ, ತೆಲಾಂಗಣದ ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದರು.

READ | ಚಾಕ್ಲೆಟ್ ಕೊಡಿಸುವುದಾಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನಿಗೆ 20 ವರ್ಷ ಜೈಲು

ಜು.25ರಂದು ಬೆಳಗ್ಗೆ 10 ಗಂಟೆಗೆ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಕ್ರೀಡಾಕೂಟದಲ್ಲಿ 500ಕ್ಕೂ ಅಧಿಕ ಕ್ರೀಡಾಪಟುಗಳು, 100 ತೀರ್ಪುಗಾರರು, ಕ್ರೀಡಾಧಿಕಾರಿಗಳು, ತರಬೇತಿದಾರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಪ್ರಮುಖರಾದ ಕುಮಾರ್ ವಿ. ನಾಯ್ಡು, ಚಂದ್ರಕಾಂತ್ ಇದ್ದರು.

Leave a Reply

Your email address will not be published. Required fields are marked *

error: Content is protected !!