ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬ್ರಿಟನ್ನಿಂದ ಬಂದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರ ವೈರಸ್ ಇರುವುದು ದೃಢಪಟ್ಟ ಪ್ರಕರಣ ಸಂಬಂಧಪಟ್ಟಂತೆ ಎಲ್ಲರೂ ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಎರಡು ಹಂತದ ಕೋವಿಡ್ ಪರೀಕ್ಷೆ ಮಾಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಸೋಂಕಿತರನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಸೀಲ್ ಡೌನ್ ಪ್ರವರ
ಕಟ್ಟುನಿಟ್ಟಿನ ಕ್ರಮಕ್ಕೆ ಲಿಂಕ್ ಕಟ್ | ಬ್ರಿಟನ್ ಸೇರಿದಂತೆ ಐರೋಪ್ಯ ರಾಷ್ಟ್ರಗಳಲ್ಲಿ ರೂಪಾಂತರ ಕೊರೊನಾದಿಂದಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಇದರಿಂದಾಗಿ, ರಾಜ್ಯ ಸರ್ಕಾರ ಹಾಗೂ ಶಿವಮೊಗ್ಗ ಜಿಲ್ಲಾಡಳಿತ ಆರಂಭಿಕ ಹಂತದಲ್ಲಿಯೇ ಸೋಂಕಿತರನ್ನು ಪತ್ತೆ ಹಚ್ಚಿ ಸೋಂಕು ಹರದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರ ಫಲವಾಗಿ ರೂಪಾಂತರ ಕೊರೊನಾ ವೈರಸ್ ಸೋಂಕು ಹರಡಲು ಸಾಧ್ಯವಾಗಿಲ್ಲ.