ಜೋಗ ನೋಡಲು ಬಂದ ಮಹಿಳೆ ಸಾವು

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಜೋಗ (Jog) ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬಳು ಸಾಗರ ತಾಲೂಕಿನ ತಳಕಳಲೆ ಡ್ಯಾಂ(Talakalale dam)ನ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

READ | ಮಳೆ‌ ಹಿನ್ನೆಲೆ ಶಿವಮೊಗ್ಗದ 3 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು (Bangaluru) ಮೂಲದ ನಿಶಾ(24) ಮೃತರು. ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ತನ್ನ ಪತಿ ನಾಗೇಶ್ ಅವರೊಂದಿಗೆ ಜೋಗ ಜಲಪಾತ ವೀಕ್ಷಿಸುವುದಕ್ಕಾಗಿ ಬಂದಿದ್ದರು. ಈ ವೇಳೆ ಜೋಗದ ಜಂಗಲ್ ರೆಸಾರ್ಟ್ ಸಮೀಪದ ಹಿನ್ನೀರಿನ ಬಳಿ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರ ನೆರವಿನೊಂದಿಗೆ ನಿಶಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.