Ganesh festival | ಗಣಪತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆ‌ ಕಂಡಿಷನ್ಸ್

Ganesh Police meeting

 

 

  • 2018-19ರಂತೆಯೇ ಈ ಸಲವೂ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು
  • ರಸ್ತೆಯ ಮೇಲೆ ಸಾರ್ವಜನಿಕರಿಗೆ ತೊಂದರೆ ಆಗುವಂತೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ

ಸುದ್ದಿ ಕಣಜ.ಕಾಂ | DISTRICT | 21 AUG 2022
ಶಿವಮೊಗ್ಗ: ನಗರದ ಡಿಎಆರ್ (DAR) ಸಭಾಂಗಣದಲ್ಲಿ ಭಾನುವಾರ ಗಣೇಶ ಮಂಡಳಗಳ‌ ಮುಖಂಡರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಸುಮಾರು 150ಕ್ಕೂ ಅಧಿಕ ಜನ ಭಾಗವಹಿಸಿ ತಮ್ಮ‌ಸಲಹೆಗಳನ್ನು ನೀಡಿದರು. ಜತೆಗೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೀಡಿದ ಸೂಚನೆಗಳನ್ನು ಆಲಿಸಿದರು.

READ | ಶಿರಾಳಕೊಪ್ಪ ಪೊಲೀಸರ ಭರ್ಜರಿ ಕಾರ್ಯಾಚರಣೆ, ಒಂದು ಕೇಸ್ ಬೇಧಿಸಲು ಹೋಗಿ 14 ಪ್ರಕರಣಗಳು ಪತ್ತೆ

ಸಭೆಯಲ್ಲಿ ನೀಡಲಾದ ಸೂಚನೆಗಳು

  • ಗಣೇಶ ಪ್ರತಿಷ್ಠಾಪನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶ ನೀಡಲಾಗುವುದು
  • ವಿಸರ್ಜನಾ ಮೆರವಣಿಗೆಯ ಮಾರ್ಗದ ಬಗ್ಗೆ ಪೊಲೀಸ್ ಇಲಾಖೆಗೆ ಸರಿಯಾದ ಮಾಹಿತಿ ನೀಡಬೇಕು.‌ ಕೊನೆ ಸಂದರ್ಭದಲ್ಲಿ ನಿರ್ಧಾರಗಳನ್ನು ಬದಲಿಸುವಂತಿಲ್ಲ.
  • 2019ರಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದಾಗ ಡಿಜೆ ಬಳಸಲು ಅವಕಾಶ ನೀಡಲಾಗುತಿತ್ತು. ಆದರೆ, ನ್ಯಾಯಾಲಯದ ಸೂಚನೆ ಹಿನ್ನೆಲೆ‌ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಗೆ‌ ಅವಕಾಶ ಇರುವುದಿಲ್ಲ.
  • ವಿದ್ಯುತ್ ಲೈನ್ ಗೆ ಸ್ಪರ್ಶವಾಗುವಷ್ಟು ಎತ್ತರದ ಗಣೇಶ ಮೂರ್ತಿಗಳು ಶಿವಮೊಗ್ಗದಲ್ಲಿ ಪ್ರತಿಷ್ಠಾಪನೆ ಮಾಡುವುದಿಲ್ಲ. ಆದರೂ ಮೆರವಣಿಗೆ ವೇಳೆ‌ ಜಾಗೃತೆ ವಹಿಸಬೇಕು.
  • ಮೆಸ್ಕಾಂ, ಅಗ್ನಿಶಾಮಕ, ಪಾಲಿಕೆ, ಪೊಲೀಸ್ ಇಲಾಖೆಗಳಿಂದ ಪರವಾನಗಿ ಪಡೆಯಲು ಸಿಂಗಲ್ ವಿಂಡೋ‌ ಸಿಸ್ಟಂ ಮಾಡಲಾಗುವುದು. ನಾಲ್ಕು ಜಾಗಗಳಲ್ಲಿ ಸೌಲಭ್ಯ ಕಲ್ಪಿಸಲಾಗುವುದು.
  • ಗಣಪತಿ ಮೆರವಣಿಗೆ ಮಾಡುವ ಮಾರ್ಗದಲ್ಲಿ ಸಿಸಿ ಟಿವಿಗಳ ಮೂಲಕ ಗಮನಹರಿಸಲಾಗುವುದು. ಜತೆಗೆ, ಸಮಿತಿಯವರು ವಿಸರ್ಜನೆಯ ಸಮಯವನ್ನು ಮುಂಚೆಯೇ ತಿಳಿಸಬೇಕು.
  • ಹಿಂದೂ ಮಹಾಸಭೆ ಗಣಪತಿ, ಓಂ ಗಣಪತಿ ವಿಸರ್ಜನೆ ಸಮಯಕ್ಕೆ ಬೇರೆ ಯಾವುದೇ ಗಣಪತಿ ವಿಸರ್ಜಿಸುವಂತಿಲ್ಲ.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎಂ. ಲಕ್ಷ್ಮೀ ಪ್ರಸಾದ್‌, ಹೆಚ್ಚುವರಿ ಎಸ್ಪಿ ವಿಕ್ರಂ ಆಮ್ಟೆ, ಡಿವೈಎಸ್ಪಿ ಬಾಲರಾಜ್‌ ಇದ್ದರು..

https://suddikanaja.com/2021/09/19/hindu-mahasabha-ganesh/

Leave a Reply

Your email address will not be published. Required fields are marked *

error: Content is protected !!