Shimoga Crime | ಶಿವಮೊಗ್ಗದ ಮೂವರು ರೌಡಿಗಳಿಗೆ ಒಂದು ವರ್ಷ ಜೈಲು, ಬಚ್ಚನ್ ಕಲಬುರಗಿ ಜೈಲಿಗೆ ಶಿಫ್ಟ್

Bacchan

 

 

ಸುದ್ದಿ ಕಣಜ.ಕಾಂ‌| DISTRICT | 26 AUG 2022
ಶಿವಮೊಗ್ಗ: ರೌಡಿಶೀಟರ್’ಗಳಾದ ಬಚ್ಚನ್, ಸಲೀಂ ಹಾಗೂ ಕಡೇಕಲ್ ಅಬೀದ್’ಗೆ ವಿಧಿಸಿದ ಜೈಲು ಶಿಕ್ಷೆಯನ್ನು ಒಂದು ವರ್ಷ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ‌. ಬಚ್ಚನ್ ಗೆ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಟಿಪ್ಪುನಗರ ನಿವಾಸಿ ಜಮೀರ್‌ ಅಲಿಯಾಸ್‌ ಬಚ್ಚಾ ಅಲಿಯಾಸ್‌ ಬಚ್ಚನ್‌ (31), ಸೂಳೆಬೈಲು ನಿವಾಸಿ ಸಲೀಂ ಅಲಿಯಾಸ್‌ ಚೋರ್‌ ಸಲೀಂ (36) ಹಾಗೂ ಕಡೇಕಲ್‌ ನಿವಾಸಿ ಅಬೀದ್‌ ಖಾನ್‌ ಅಲಿಯಾಸ್‌ ಕಡೇಕಲ್‌ ಅಬೀದ್‌ (34) ಇವರುಗಳ ಸೆರೆವಾಸದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

READ | ಶಿವಮೊಗ್ಗದಲ್ಲಿ‌ ಗಣೇಶ ಹಬ್ಬ ಹಿನ್ನೆಲೆ ಇಬ್ಬರಿಗೆ ಗಡಿಪಾರು, ಕಾರಣವೇನು?

ಬಚ್ಚನ್ ಮೇಲೆ ರಾಜ್ಯದ ಹಲವೆಡೆ 22 ಕೇಸ್
ಬಚ್ಚನ್ ತನ್ನ 17ನೇಯ ವಯಸ್ಸಿನಲ್ಲಿಯೇ ರೌಡಿ ಮತ್ತು ಸಮಾಜಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾನೆ. ಸಹಚರರ ಜೊತೆ ಸೇರಿ ಅಕ್ರಮ ಚಟುವಟಿಕೆಗಳನ್ನು ನಡೆಸಿದ್ದಾನೆ. ಮಾರಕಾಸ್ತ್ರ ಹಿಡಿದು ಕೊಲೆ ಪ್ರಯತ್ನ, ದರೋಡೆ, ಸುಲಿಗೆ, ಮೋಸ ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಹೀಗೆ ನಾನಾ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದಾನೆ. ಬಚ್ಚನ್ ವಿರುದ್ಧ ಶಿವಮೊಗ್ಗ, ಬೆಂಗಳೂರು ನಗರ, ಮಂಡ್ಯ ಹಾಗೂ ಹಾಸನದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿವೆ.
ರೌಡಿಶೀಟ್, ಎಂಓಬಿ, ಬಾಂಡ್ ಓವರ್.‌‌..
ಬಚ್ಚನ್ ವಿರುದ್ಧ ರೌಡಿಶೀಟ್‌ ಮತ್ತು ಎಂಓಬಿ (Modus Operandi Bureau) ಕಾರ್ಡ್‌ಗಳನ್ನು ತೆರೆಯಲಾಗಿದೆ. ಬಾಂಡ್‌ ಓವರ್‌ ಮಾಡಿದ್ದರೂ ಬಾಂಡ್‌ ಷರತ್ತುಗಳನ್ನು ಉಲ್ಲಂಘಿಸಿ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಈತನನ್ನು ಗೂಂಡಾ ಕಾಯ್ದೆ ಅಡಿ ಬಂಧನದಲ್ಲಿ ಇರಿಸುವಂತೆ ಮನವಿ ಮಾಡಿದ್ದಕ್ಕೆ ಜಿಲ್ಲಾಧಿಕಾರಿಯು ಬಂಧನದ ಆಜ್ಞೆ ಹೊರಡಿಸಿ ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿ ಇರಿಸಲು ಆದೇಶಿಸಿದ್ದಾರೆ.

READ | ಶಿವಮೊಗ್ಗದಲ್ಲಿ ಓಟರ್ ಐಡಿಗೆ ಆಧಾರ್‌ ಜೋಡಣೆ ಅಭಿಯಾನ ನಾಳೆ

ಸಲಹಾ‌ ಮಂಡಳಿ ಹೇಳಿದ್ದೇನು?
ಗೂಂಡಾ ಕಾಯ್ದೆ ಅಧಿನಿಯಮ ಅಡಿಯಲ್ಲಿ ರಚಿತವಾದ ಸಲಹಾ ಮಂಡಳಿಯು ಬಚ್ಚನ್‌’ನನ್ನು ಬಂಧನದಲ್ಲಿ ಇಡುವುದಕ್ಕೆ ಹಲವು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ಸಲ್ಲಿಸಿದೆ. ರಾಜ್ಯ ಸರಕಾರ ಈ ಎಲ್ಲ‌ ಅಂಶಗಳನ್ನು ಪರಿಶೀಲಿಸಿ ಸಾಮಾಜಿಕ ಸ್ವಾಸ್ಥ್ಯದ ಕಾರಣಕ್ಕೆ ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ಸ್ಥಿರೀಕರಿಸಿದೆ. ಜತೆಗೆ, ಆರೋಪಿಯ ಬಂಧನವನ್ನು 2022ರ ಜುಲೈ 15ರಿಂದ 1 ವರ್ಷದವರೆಗೆ ಮುಂದುವರಿಸುವಂತೆ ತಿಳಿಸಿದೆ.

https://suddikanaja.com/2022/06/25/karnataka-state-government-gunda-act-extend-for-one-year-against-saleem/

Leave a Reply

Your email address will not be published. Required fields are marked *

error: Content is protected !!