Hindu Mahasabha Ganapati | ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ, ಅದ್ಧೂರಿ ಮೆರವಣಿಗೆ

Hindu mahasabha ganesha

 

 

  • ನಗರದ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ
  • ಸಾಂಪ್ರದಾಯಿಕವಾಗಿ ಮಂಗಳ ವಾದ್ಯಗಳೊಂದಿಗೆ ನಡೆದ ಮರವಣಿಗೆ

ಸುದ್ದಿ ಕಣಜ.ಕಾಂ | DISTRICT | 31 AUG 2022
ಶಿವಮೊಗ್ಗ: ನಗರದ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನ(Kote Shree Bheemeshwar temple) ದಲ್ಲಿ ಹಿಂದೂ ಸಂಘಟನೆಗಳ ಮಹಾಮಂಡಳ(Hindu Mahasabha)ದ ಗಣಪತಿಯನ್ನು ಬುಧವಾರ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ವಿಘ್ನ ನಿವಾರಕನ ದರ್ಶನ ಪಡೆದರು.

ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ (VIDEO REPORT) 

READ | ಕೆರೆ, ಬಾವಿಗೆ ಬಣ್ಣ ಲೇಪಿತ ಗಣಪತಿ ವಿಗ್ರಹ ವಿಸರ್ಜಿಸಿದರೆ ₹10,000 ದಂಡ, KSPCB ಕಾನೂನು‌ ಹೇಳುವುದೇನು? 

ಕುಂಬಾರಗುಂಡಿಯಲ್ಲಿ ಕಲಾವಿದ ಗಣೇಶ್ ಅವರು ತಯಾರಿಸಿದ ಗಣಪತಿ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಭೀಮೇಶ್ವರ ದೇವಸ್ಥಾನಕ್ಕೆ ತರಲಾಯಿತು. ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಲಾಯಿತು.
ಪ್ರತಿ ವರ್ಷದಂತೆ ಸಂಪ್ರದಾಯಬದ್ಧವಾಗಿ ಗಣಪತಿ ಮೂರ್ತಿಯನ್ನು ದೇವಸ್ಥಾನಕ್ಕೆ ಬಂದ ಬಳಿಕ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ತದನಂತರ, ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

One thought on “Hindu Mahasabha Ganapati | ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ, ಅದ್ಧೂರಿ ಮೆರವಣಿಗೆ

Leave a Reply

Your email address will not be published. Required fields are marked *

error: Content is protected !!