ಸುದ್ದಿ ಕಣಜ.ಕಾಂ | DISTRICT | 31 AUG 2022
ಶಿವಮೊಗ್ಗ: ಜಿಲ್ಲೆಯಾದ್ಯಂತ ಗಣಪತಿ ಹಬ್ಬ ಕಳೆಗಟ್ಟಿದೆ. ಎಲ್ಲೆಡೆ ವಿಘ್ನ ನಿವಾರಕನ ಪರ ಘೋಷಣೆಗಳನ್ನು ಕೂಗಲಾಯಿತು. ಬೆಳಗ್ಗೆಯಿಂದಲೇ ವಿವಿಧೆಡೆಯಿಂದ ಆಗಮಿಸಿದ ಜನರು ಗಣಪತಿಯ ಮೂರ್ತಿಗಳನ್ನು ಖರೀದಿಸಿ ಮಂಗಳ ವಾದ್ಯ ಮೆರವಣಿಗೆಯೊಂದಿಗೆ ಕೊಂಡೊಯ್ದರು.
READ | ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ, ಅದ್ಧೂರಿ ಮೆರವಣಿಗೆ
ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರ ಬಂದೋಬಸ್ತ್ ಮಾಡಲಾಗಿತ್ತು. ನಗರದ ಸೈನ್ಸ್ ಮೈದಾನ, ಗೋಪಿ ವೃತ್ತ, ವಿನೋಬನಗರ ಪೊಲೀಸ್ ಚೌಕಿ, ಜೈಲ್ ಸರ್ಕಲ್, ಲಕ್ಷ್ಮೀ ಚಿತ್ರಮಂದಿರ ವೃತ್ತ ಸೇರಿದಂತೆ ಹಲವೆಡೆ ವಿವಿಧ ಪ್ರಕಾರದ ಮಣ್ಣಿನ ಗಣಪತಿಗಳನ್ನು ಮಾರಾಟಕ್ಕೆ ಇಡಲಾಗಿದೆ. 100 ರೂಪಾಯಿಯಿಂದ ಸಾವಿರಾರು ರೂಪಾಯಿವರೆಗೆ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡಲಾಗಿದೆ.