ಸುದ್ದಿ ಕಣಜ.ಕಾಂ
ಭದ್ರಾವತಿ: ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ಮೋಮಿನ್ ಮೊಹಲ್ಲಾದ ಸೈಯ್ಯದ್ ಅರ್ಬಾಜ್ ಅಲಿಯಾಸ್ ಮಂಡ್ಯಾ (23), ನೆಹರೂ ನಗರದ ಪರ್ವಿಜ್ ಅಲಿಯಾಸ್ ಮಾಯಾ (22) ಎಂಬುವವರನ್ನು ಬಂಧಿಸಲಾಗಿದೆ.
ಶುಕ್ರವಾರ ಸಂಜೆ ಗಾಂಜಾ ಮಾರಾಟ ಮಾಡುತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಭದ್ರಾವತಿ ನಗರ ಸಿ.ಪಿ.ಐ ಸಿಬ್ಬಂದಿಯೊಂದಿಹೆ ಸ್ಥಳಕ್ಕೆ ದಾಳಿನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.